×
Ad

ಬಂಟ್ವಾಳ ಪುರಸಭೆ: ಕಪಾಟು ವಿತರಣೆ

Update: 2017-06-30 21:52 IST

ಬಂಟ್ವಾಳ, ಜೂ. 30: ಇಲ್ಲಿನ ಪುರಸಭೆಯ ಶೇ. 24.10 ಯೋಜನೆಯಡಿ ಮೀಸಲಿರಿಸಿದ ಕಳೆದ ಸಾಲಿನ ಅನುದಾನದಲ್ಲಿ ಪುರಸಭಾ ವ್ಯಾಪ್ತಿಯ ಮೊಡಂಕಾಪು, ಪಾಣೆಮಂಗಳೂರು, ಹಾಗೂ ಜೋಡುಮಾರ್ಗದ ಪ.ಜಾತಿ ಮತ್ತು ಪಂಗಡದ ಹಾಸ್ಟೆಲ್‌ಗಳಿಗೆ ಸ್ಟೀಲು ಕಪಾಟುಗಳನ್ನು ವಿತರಿಸಲಾಯಿತು.

ಮೊಡಂಕಾಪು ಹಾಸ್ಟೆಲ್‌ಗಳಿಗೆ 15, ಪಾಣೆಮಂಗಳೂರಿಗೆ 19, ಹಾಗೂ ಜೋಡುಮಾರ್ಗ ಹಾಸ್ಟೆಲ್‌ಗಳಿಗೆ 20 ಕಪಾಟುಗಳನ್ನು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಚಂಚಲಾಕ್ಷಿ, ಪ್ರಭಾ ಸಾಲ್ಯಾನ್, ಮುಖ್ಯಾಧಿಕಾರಿ ಸುಧಾಕರ ಹಾಜರಿದ್ದರು. ಸಮುದಾಯ ಸಂಘಟನಾಧಿಕಾರಿ ಮತ್ತಡಿ ಸ್ವಾಗತಿಸಿ, ಸಂಘಟಕಿ ಉಮಾವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News