ಆಸ್ಟ್ರೇಲಿಯ: ಸಿಖ್ 5ನೆ ಅತಿ ದೊಡ್ಡ ಧರ್ಮ

Update: 2017-06-30 16:31 GMT

ಮೆಲ್ಬರ್ನ್, ಜೂ. 30: ಆಸ್ಟ್ರೇಲಿಯದಲ್ಲಿ ಸಿಖ್ಖರ ಸಂಖ್ಯೆ ಐದು ವರ್ಷಗಳ ಹಿಂದಿದ್ದ 72,000ದಿಂದ ಈಗ 1.26 ಲಕ್ಷಕ್ಕೆ ಏರಿದೆ. ಇದರೊಂದಿಗೆ ಸಿಖ್ ಧರ್ಮವು ಆ ದೇಶದ ಐದನೆ ಅತಿ ದೊಡ್ಡ ಧರ್ಮವಾಗಿದೆ.

ಕ್ರೈಸ್ತ, ಇಸ್ಲಾಮ್, ಬೌದ್ಧ ಮತ್ತು ಹಿಂದೂ ಧರ್ಮಗಳು ಮೊದಲ ನಾಲ್ಕು ಸ್ಥಾನಗಳಲ್ಲಿವೆ.

ಆಸ್ಟ್ರೇಲಿಯ ಸರಕಾರ ಬಿಡುಗಡೆ ಮಾಡಿದ 2016ರ ಜನಗಣತಿ ಅಂಕಿಸಂಖ್ಯೆಗಳು ಈ ಮಾಹಿತಿಯನ್ನು ನೀಡಿವೆ.
2006ರ ಜನಗಣತಿಯಲ್ಲಿ ಸಿಖ್ ಧರ್ಮವು ಆಸ್ಟ್ರೇಲಿಯದಲ್ಲಿ ದಾಖಲಾಗಿರುವ 20 ಧರ್ಮಗಳ ಪಟ್ಟಿಯಲ್ಲೂ ಸ್ಥಾನ ಪಡೆದಿರಲಿಲ್ಲ. ಅಂದು ದೇಶದಲ್ಲಿ ಸುಮಾರು 26,000 ಸಿಖ್ಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News