ಅಲ್ ಜಝೀರ ಮುಚ್ಚಬೇಕೆಂಬ ಬೇಡಿಕೆ ಅಸ್ವೀಕಾರಾರ್ಹ: ವಿಶ್ವಸಂಸ್ಥೆ

Update: 2017-06-30 17:25 GMT

ಜಿನೇವ, ಜೂ. 30: ತನ್ನ ‘ಅಲ್ ಜಝೀರ’ ಟಿವಿ ಚಾನೆಲನ್ನು ಮುಚ್ಚಬೇಕೆಂದು ಸೌದಿ ಅರೇಬಿಯ ಮತ್ತು ಇತರ ಅರಬ್ ದೇಶಗಳು ಕತರನ್ನು ಒತ್ತಾಯಿಸುತ್ತಿರುವುದು ಅಭಿವ್ಯಕ್ತಿ ಮತ್ತು ಅಭಿಪ್ರಾಯ ಸ್ವಾತಂತ್ರದ ಮೇಲಿನ ದಾಳಿಯಾಗಿದೆ ಹಾಗೂ ಅದು ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಝೈದ್ ರಅದ್ ಅಲ್-ಹುಸೈನ್ ಶುಕ್ರವಾರ ಹೇಳಿದ್ದಾರೆ.

ಅಲ್ ಜಝೀರ ಚಾನೆಲ್ ಮತ್ತು ಅದಕ್ಕೆ ಸಂಬಂಧಪಟ್ಟ ಇತರ ಮಾಧ್ಯಮ ಸಂಸ್ಥೆಗಳನ್ನು ಕತರ್ ಮುಚ್ಚಬೇಕೆನ್ನುವ ಬೇಡಿಕೆಯಿಂದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ‘ಅತ್ಯಂತ ಕಳವಳಗೊಂಡಿದ್ದಾರೆ’ ಎಂದು ಅವರ ವಕ್ತಾರ ರೂಪರ್ಟ್ ಕೊಲ್‌ವಿಲ್ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News