×
Ad

ರಸಗೊಬ್ಬರ ಜಿಎಸ್‌ಟಿ ಶೇ.5ಕ್ಕೆ ಇಳಿಕೆ

Update: 2017-06-30 23:21 IST

   ಹೊಸದಿಲ್ಲಿ,ಜೂ.31: ಸರಕು ಹಾಗೂ ಸೇವಾ ತೆರಿಗೆಯ ಜಾರಿಗೆ ಕೆಲವೇ ತಾಸುಗಳ ಮೊದಲು ಸಭೆ ಸೇರಿದ ಜಿಎಸ್‌ಟಿ ಮಂಡಳಿಯು ರಸಗೊಬ್ಬರಗಳ ಮೇಲಿನ ತೆರಿಗೆ ದರವನ್ನು ಶೇ.12ರಿಂದ ಶೇ.5ಕ್ಕೆ ಇಳಿಸಿದೆ. ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅದು ಹೇಳಿದೆ.

ರಸಗೊಬ್ಬರಗಳ ಮೇಲೆ ಈ ಮೊದಲು ಶೇ.12ರಷ್ಟು ಜಿಎಸ್‌ಟಿ ವಿಧಿಸಿರುವುದು ರೈತರ ಬವಣೆಯನ್ನು ಹೆಚ್ಚಿಸಲಿದೆ ಎಂದು ಮಂಡಳಿಯ ಕೆಲವು ಸದಸ್ಯರು ಅಭಿಪ್ರಾಯಿಸಿದ್ದರು. ಹೀಗಾಗಿ ರಸಗೊಬ್ಬರದ ಮೇಲಿನ ಜಿಎಸ್‌ಟಿಯನ್ನು ಶೇ. 5ಕಷ್ಟು ಇಳಿಕೆ ಮಾಡಲಾಯಿತು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಹೊಸದಿಲ್ಲಿಯ ವಿಜ್ಞಾನಭವನದಲ್ಲಿ ಶುಕ್ರವಾರ ಸಂಜೆ ನಡೆದ ಜಿಎಸ್‌ಟಿ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಹಿಸಿದ್ದರು.

ಪ್ರಸ್ತುತ ವಿವಿಧ ರಾಜ್ಯಗಳಲ್ಲಿ ಜಿಎಸ್‌ಟಿಗೆ 0-ಶೇ.6ರವರೆಗೆ ತೆರಿಗೆ ವಿಧಿಸಲಾಗುತ್ತದೆ.

ಒಂದು ವೇಳೆ ರಸಗೊಬ್ಬರದ ಮೇಲಿನ ಜಿಎಸ್‌ಟಿಯನ್ನು ಶೇ.12ಕ್ಕೆ ನಿಗದಿಪಡಿಸಿರುತ್ತಿದ್ದರೆ ಒಂದು ಬ್ಯಾಗ್ (50 ಕೆ.ಜಿ.) ಯೂರಿಯಾ ಮತ್ತಿತರ ರಸಗೊಬ್ಬರ ಬೆಲೆಯಲ್ಲಿ 30 ರೂ.ಗಳಿಂದ 120 ರೂ.ವರೆಗೂ ಏರಿಕೆಯಾಗುತ್ತಿತ್ತು.

  ಆದರೆ ಪ್ರಸ್ತುತ ಪಂಜಾಬ್, ರ್ಯಾಣ,ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿ ರಸಗೊಬ್ಬರಗಳಿಗೆ ತೆರಿಗೆಯನ್ನೇ ವಿಧಿಸಲಾಗುತ್ತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News