×
Ad

ಭಾರತ ಮೂಲದ ಇಬ್ಬರು ಅಮೆರಿಕನ್ನರಿಗೆ "ಶ್ರೇಷ್ಠ ವಲಸಿಗ ಪ್ರಶಸ್ತಿ"

Update: 2017-07-01 20:03 IST

ನ್ಯೂಯಾರ್ಕ್, ಜು. 1: ದೇಶದ ಸಮಾಜ, ಸಂಸ್ಕೃತಿ ಹಾಗೂ ಆರ್ಥಿಕತೆಗೆ ನೆರವು ನೀಡಿರುವುದಕ್ಕಾಗಿ ಈ ವರ್ಷ ಗೌರವಿಸಲಾಗುತ್ತಿರುವ 38 ವಲಸಿಗರಲ್ಲಿ ಭಾರತ ಮೂಲದ ಅಮೆರಿಕನರಾದ ಅಡೋಬ್ ಮುಖ್ಯಸ್ಥ ಶಂತನು ನಾರಾಯಣ ಹಾಗೂ ಅಮೆರಿಕದ ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಒಳಗೊಂಡಿದ್ದಾರೆ.

ಅಮೆರಿಕದ ಸ್ವಾತಂತ್ರ ದಿನಾಚರಣೆ ಜುಲೈ 4ರಂದು ನಡೆಯಲಿದ್ದು, ಈ ಸಂದರ್ಭ ಶಂತುನು ನಾರಾಯಣ ಹಾಗೂ ವಿವೇಕ್ ಮೂರ್ತಿಗೆ ಪ್ರತಿಷ್ಠಿತ ಶ್ರೇಷ್ಠ ವಲಸಿಗ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

39ರ ಹರೆಯದ ವಿವೇಕ್ ಮೂರ್ತಿ ಇಂಗ್ಲೆಂಡ್‌ನಲ್ಲಿ ಜನಿಸಿದರು. ಅವರು ಹಾಲೆ ಹಾಗೂ ಹಾರ್ವರ್ಡ್‌ನ ಹಳೇ ವಿದ್ಯಾರ್ಥಿ. ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮ 2014ರಲ್ಲಿ ವಿವೇಕ್ ಮೂರ್ತಿ ಅವರನ್ನು ದೇಶದ ಜನರಲ್ ಶಸ್ತ್ರಚಿಕತ್ಸಕರನ್ನಾಗಿ ನೇಮಕ ಮಾಡಿದ್ದರು. ಈ ಸ್ಥಾನಕ್ಕೆ ಓರ್ವ ಭಾತ ಮೂಲದ ಅಮೇರಿಕನ್ ಹಾಗೂ ಯುವ ಶಸ್ತ್ರಚಿಕಿತ್ಸಕ ಆಯ್ಕೆ ಆಗಿರುವುದು ಇದೇ ಪ್ರಥಮ ಆಗಿತ್ತು. ಕಳೆದ ವರ್ಷ ಟ್ರಂಪ್ ಸರಕಾರ ಅಸ್ತಿತ್ವಕ್ಕೆ ಬಂದ ಅನಂತರ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.

 55ರ ಹರೆಯದ ಶಂತನು ನಾರಾಯಣ ಅವರ ಹುಟ್ಟೂರು ಹೈದರಾಬಾದ್. ಅವರು ಬರ್ಕಲಿ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ, ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂಬಿಎ ಪದವಿ ಪಡೆದಿದ್ದರು. ಅವರು ಯುಎಸ್‌ಐಬಿಸಿ ಮಂಡಳಿಯ ಸದಸ್ಯರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News