×
Ad

ಸಂತ ಅಲೋಶಿಯಸ್ ರಸ್ತೆ ಹೆಸರು ಬದಲಾವಣೆಗೆ ತಡೆಯಾಜ್ಞೆ

Update: 2017-07-01 20:29 IST
ಸಂತ ಅಲೋಶಿಯಸ್ ರಸ್ತೆ ಹೆಸರು ಬದಲಾವಣೆ ವಿರುದ್ಧ ವಿದ್ಯಾರ್ಥಿಗಲಿಂದ ನಡೆದ ಪ್ರತಿಭಟನೆ

ಮಂಗಳೂರು, ಜು. 1: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಲೈಟ್‌ಹೌಸ್ ಮಾರ್ಗದ ಕ್ಯಾಥಲಿಕ್ ಕ್ಲಬ್ ವರೆಗಿನ ರಸ್ತೆಗೆ ‘ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ’ ಎಂದು ನಾಮಕರಣ ಮಾಡಲು ಆದೇಶಿಸಿರುವ ಸರಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ (ಪ್ರ) ಎಲ್.ನಾಗೇಶ್ ಅವರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೊಬೋ ಅವರು ಬರೆದಿರುವ ಪತ್ರಕ್ಕೆ ಸಂಬಂಧಿಸಿ ಈ ತಡೆಯಾಜ್ಞೆ ನೀಡಿದ್ದಾರೆ.

ಮೇ 24ರಂದು ಹೊರಡಿಸಿರುವ ಸರಕಾರದ ಆದೇಶಕ್ಕೆ ಸಂಬಂಧಿಸಿ ಶಾಸಕ ಜೆ.ಆರ್.ಲೋಬೊ ಅವರು ಸರಕಾರಕ್ಕೆ ಪತ್ರ ಬರೆದು ಸರಕಾರದ ಈ ಆದೇಶದಿಂದ ನಗರದ ಜನರಿಗೆ ನೋವುಂಟಾಗಿದೆ. ಇದರಿಂದಾಗಿ ನಗರದಲ್ಲಿ ಅಶಾಂತಿಗೆ ಕಾರಣವಾಗುವ ಸಾಧ್ಯತೆಯನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

 ಇದೀಗ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ (ಪ್ರ) ಎಲ್.ನಾಗೇಶ್ ಅವರು ಮೇ 24ರ ಸರಕಾರದ ಆದೇಶಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿ ಯಥಾ ಸ್ಥಿತಿ ಕಾಪಾಡುವಂತೆ ಜಿಲ್ಲಾಧಿಕಾರಿಯವರಿಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News