ಪಾಕ್: ಹಫೀಝ್ ಸಯೀದ್‌ನ ಸಂಘಟನೆಗೆ ನಿಷೇಧ

Update: 2017-07-01 16:34 GMT

ಇಸ್ಲಾಮಾಬಾದ್, ಜು. 1: ಜಮಾಅತ್ ಉದ್ ದಾವಾ ಮುಖ್ಯಸ್ಥ ಹಫೀಝ್ ಸಯೀದ್ ಹುಟ್ಟು ಹಾಕಿದ ತೆಹ್ರೀಕೆ ಆಝಾದಿ ಜಮ್ಮು ಮತ್ತು ಕಾಶ್ಮೀರ (ಟಿಎಜೆಕೆ) ಭಯೋತ್ಪಾದಕ ಸಂಘಟನೆಯನ್ನು ಪಾಕಿಸ್ತಾನ ಸರಕಾರ ನಿಷೇಧಿಸಿದೆ.

ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಈ ಕ್ರಮವನ್ನು ತೆಗೆದುಕೊಂಡಿದೆ. ಈ ವರ್ಷದ ಜನವರಿಯಲ್ಲಿ ಹಫೀಝ್ ಸಯೀದ್‌ನನ್ನು ಗೃಹಬಂಧನದಲ್ಲಿಟ್ಟ ಕೆಲವೇ ದಿನಗಳ ಬಳಿಕ ಆತ ಈ ಸಂಘಟನೆಯನ್ನು ಸ್ಥಾಪಿಸಿದ್ದನು.

ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರವು ಆಂತರಿಕ ಸಚಿವಾಲಯದ ನಿಷೇಧಿತ ಸಂಘಟನೆಗಳ ಪಟ್ಟಿಗೆ ಟಿಎಜೆಕೆಯನ್ನು ಜೂನ್ 8ರಂದು ಸೇರಿಸಿದೆ.

ಜಮಾಅತ್ ಉದ್ ದಾವಾದ ಇನ್ನೊಂದು ಭಯೋತ್ಪಾದಕ ಘಟಕ ಲಷ್ಕರೆ ತಯ್ಯಬ, ಜೈಶೆ ಮುಹಮ್ಮದ್ ಮತ್ತು ಪಾಕಿಸ್ತಾನಿ ತಾಲಿಬಾನ್‌ಗಳೂ ಆಂತರಿಕ ಸಚಿವಾಲಯ ನಿಷೇಧಿಸಿದ 65 ಸಂಘಟನೆಗಳ ಪಟ್ಟಿಯಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News