ಅಕ್ರಮ ಮರಳು ಸಾಗಾಟ: ಲಾರಿ, ಜೆಸಿಬಿ ವಶ
Update: 2017-07-01 22:40 IST
ಮಂಗಳೂರು, ಜು. 1: ನಗರದ ಅಡ್ಯಾರ್‌ಕಟ್ಟೆ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿ ಹಾಗೂ ಜೆಸಿಬಿಯನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಡ್ಯಾರ್‌ಕಟ್ಟೆ ಬಳಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಶೃತಿ ಅವರ ಮಾರ್ಗದರ್ಶನದಲ್ಲಿ ಶುಕ್ರವಾರ 3 ಗಂಟೆ ಸುಮಾರಿಗೆ ಪಿಎಸ್‌ಐ ವೆಂಕಟೇಶ್ ದಾಳಿ ನಡೆಸಿ 2 ಆರು ಚಕ್ರದ ಲಾರಿ, 1 ಜೆಸಿಬಿ ಯಂತ್ರ ವಶಪಡಿಸಿಕೊಂಡಿದ್ದಾರೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.