×
Ad

ಮುಸ್ಲಿಂ ಯೂತ್ ಲೀಗ್ ಮುಖಂಡನಿಗೆ ಚೂರಿ ಇರಿತ

Update: 2017-07-02 16:49 IST

ಕಾಸರಗೋಡು,ಜು.2 : ಅಂಗಡಿಗೆ ನುಗ್ಗಿದ ತಂಡವೊಂದು ಮುಸ್ಲಿಂ ಯೂತ್ ಲೀಗ್  ಮುಖಂಡನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ರವಿವಾರ ಮಧ್ಯಾಹ್ನ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ  ಇಬ್ರಾಹಿಂ ( 39) ಎಂಬವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.ಇವರು ಮೊಗ್ರಾಲ್ ಪುತ್ತೂರಿನ ಗ್ಯಾಲಕ್ಷಿ ಲೈಟ್ ಆಂಡ್ ಸೌಂಡ್ಸ್ನ ಮಾಲಕರಾಗಿದ್ದಾರೆ. 

ಮಧ್ಯಾಹ್ನ ಮಾರಕಾಯುಧ ಸಹಿತ ಅಂಗಡಿಗೆ ನುಗ್ಗಿದ ತಂಡವು ಹಲ್ಲೆ  ನಡೆಸಿ ಅಂಗಡಿಯಲ್ಲಿದ್ದ ಸಾಮಾಗ್ರಿಗಳನ್ನು ಹಾನಿಗೊಳಿಸಿದೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News