ಪತ್ರಿಕಾ ಏಜಂಟ್ ಬಾಬಣ್ಣಗೆ ಸನ್ಮಾನ
ಪಡುಬಿದ್ರಿ,ಜು.2: ಪತ್ರಿಕಾ ದಿನಚರಣೆಯ ಅಂಗವಾಗಿ ಕಳೆದ ಹನ್ನೆರಡು ವರ್ಷಗಳಿಂದ ಪಡುಬಿದ್ರಿಯಲ್ಲಿ ವಿವಿಧ ಪತ್ರಿಕಾ ಏಜಂಟಾಗಿ ಕಾರ್ಯ ನಿರ್ವಾಹಿಸುತ್ತಿರುವ ಬಾಬು ಪೂಜಾರಿ ಪಲಿಮಾರು ಇವರನ್ನು, ಕಾಪು ವಲಯ ಎಸ್‌ಕೆಪಿಎ ವತಿಯಿಂದ ಪಡುಬಿದ್ರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಮತನಾಡಿದ ಕಾಪು ಎಸ್‌ಕೆಪಿಎ ವಲಯಾಧ್ಯಾಕ್ಷ ಉದಯ ಕುಮಾರ್ ಪತ್ರಿಕಾ ಏಜಂಟ್ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಾಹಿಸುತ್ತಿರುವ ಬಾಬಣ್ಣನಂಥಹ ಅದೇಷ್ಟೋ ಮಂದಿ ಮುಂಜಾನೆ ಬೇಗನೆ ಎದ್ದು ಜನರ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಅವರ ಆ ಸೇವೆಗೆ ದೊರಕುವ ಫಲ ಮಾತ್ರ ಅವರು ಕುಟುಂಬ ಸಲಹುದಕ್ಕೂ ಸಾಲದು. ಇಂಥವರ ಕಷ್ಟವನ್ನು ಅರಿತು ಸರ್ಕಾರ ಮಟ್ಟದಲ್ಲಿ ಇವರಿಗೆ ಸಹಕಾರ ದೊರಕುವಂತ್ತಾಗಬೇಕೆಂದರು.
ಈ ಸಂದರ್ಭ ಪಿ,ಕೆ. ಸದಾನಂದ, ಸಂಸ್ಥೆಯ ಕಾರ್ಯದರ್ಶಿ ವೀರೇಂದ್ರ ಶಿರ್ವ, ಉಪಾಧ್ಯಕ್ಷರುಗಳಾದ ಸುರೇಶ್ ಎರ್ಮಾಳ್, ಮನೋಹರ್ ಕುಂದರ್, ಗೌರವ ಅಧ್ಯಕ್ಷ ಕೃಷ್ಣ ರಾವ್, ರವಿಕುಮಾರ್ ಕಟಪಾಡಿ, ಭಕ್ತ ಪ್ರಸಾದ್, ಕರುಣಾಕರ್ ನಾಯಕ್, ಪ್ರಮೋದ್ ಸುವರ್ಣ ಕಟಪಾಡಿ, ಸಂತೋಷ್ ಕಾಪು, ಸಂತೋಷ್ ಕಟಪಾಡಿ, ಪ್ರಕಾಶ್, ಅಶೋಕ್ ಆಚಾರ್ಯ, ಆರ್.ಎಸ್. ಭಟ್, ಸಚ್ಚಿನ್ ಉಚ್ಚಿಲ, ವಿಕ್ಕಿ ಪೂಜಾರಿ ಉಪಸ್ಥಿತರಿದ್ದರು.