ಬೈಕ್ ಅಪಘಾತ: ಸವಾರ ಮೃತ್ಯು
Update: 2017-07-02 20:15 IST
ಉಡುಪಿ, ಜು.2: ಕಿನ್ನಿಮುಲ್ಕಿ ಬಿ.ಆರ್.ಶೆಟ್ಟಿ ಕಂಪೌಂಡ್ ಎದುರುಗಡೆ ಜು.1ರ ಮಧ್ಯರಾತ್ರಿ ನಂತರ ಬೈಕೊಂದು ರಸ್ತೆಯ ವಿಭಜಕ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಶಿವಶರಣಪ್ಪಎಂದು ಗುರುತಿಸಲಾಗಿದೆ. ಇವರು ತನ್ನ ಬಜಾಜ್ ಡಿಸ್ಕವರಿ ಬೈಕ್‌ನಲ್ಲಿ ಕಿನ್ನಿಮುಲ್ಕಿ ಕಡೆಯಿಂದ ಜೋಡುಕಟ್ಟೆ ಕಡೆಗೆ ಬರುತ್ತಿರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ವಿಭಜಗಕ್ಕೆ ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.