ಮರಕ್ಕೆ ಕಾರು ಢಿಕ್ಕಿ: ಚಾಲಕ ಮೃತ್ಯು
Update: 2017-07-02 20:16 IST
ಹಿರಿಯಡ್ಕ, ಜು.2: ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಜು.1 ರಂದು ರಾತ್ರಿ 11.30ರ ಸುಮಾರಿಗೆ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಗುರುಪ್ರಸಾದ್(30) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಪೆರ್ಡೂರಿನ ಸಂತೋಷ ಪೂಜಾರಿ, ಭರತ, ರಾಘವೇಂದ್ರ ಎಂಬವರು ಗಾಯ ಗೊಂಡಿದ್ದಾರೆ. ಗುರುಪ್ರಸಾದ್ ತನ್ನ ಕಾರನ್ನು ಪೆರ್ಡೂರು ಪೇಟೆಯಿಂದ ಪಾಡಿ ಗಾರ ಕಡೆಗೆ ಚಲಾಯಿಸಿಕೊಂಡು ಬರುವಾಗ ರಸ್ತೆಯಲ್ಲಿ ಹರಿದು ಹೋಗುತ್ತಿದ್ದ ಮಳೆಯ ನೀರು ಕಾರಿನ ಎದುರಿನ ಗ್ಲಾಸ್‌ಗೆ ಚಿಮ್ಮಿತ್ತೆನ್ನಲಾಗಿದೆ.
ಇದರಿಂದ ಕಾರು ಹತೋಟಿ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆ ಯಿತು. ಇದರ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಇವರ ಪೈಕಿ ಗಂಭೀರವಾಗಿ ಗಾಯಗೊಂಡ ಗುರುಪ್ರಸಾದ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.