ಮೊವಾಡಿ ಸಂತ್ರಸ್ತೆಯ ಮಗ ಮೃತ್ಯು
Update: 2017-07-02 20:19 IST
ಗಂಗೊಳ್ಳಿ, ಜು.2: ಮೊವಾಡಿ ಕೊರಗರ ಕಾಲೋನಿಯಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾದ ಸಂತ್ರಸ್ತೆ ಹಾಗೂ ಹೊಸಾಡು ಗ್ರಾಪಂ ಸದಸ್ಯೆ ಶಕುಂತಲಾ ಎಂಬವರ ಮಗ ಚೆಲುವಾ(28) ಎಂಬವರು ಜು.1ರಂದು ಸಂಜೆ ವೇಳೆ ಆಕಸ್ಮಿಕವಾಗಿ ಗದ್ದೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚೆಲುವಾ ಮಧ್ಯಾಹ್ನ ಮನೆಗೆ ಊಟಕ್ಕೆ ಬಂದು ಸಂಜೆ 4ಗಂಟೆಗೆ ಪಂಚಾಯತ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದರು. ವಾಪಾಸ್ಸು ಮನೆಗೆ ಕಂಬಾರ ಕೊಡ್ಲುಮಕ್ಕಿ ರಾಮಣ್ಣ ಶೆಟ್ಟಿ ಎಂಬವರ ಗದ್ದೆಯ ದಾರಿಯ ಅಂಚಿನಲ್ಲಿ ನಡೆದುಕೊಂಡು ಬರುತ್ತಿದ್ದ ಚೆಲುವ ಆಕಸ್ಮಿಕವಾಗಿ ಕಾಲು ಜಾರಿ ಗದ್ದೆಗೆ ಬಿದ್ದು, ಏಳಲು ಆಗದೆ ನೀರಿನಲ್ಲಿ ಮೃತಪಟ್ಟಿದ್ದಾರೆ.
ಇವರು ಶಂಕುತಲಾ ಅವರ ಒಬ್ಬನೆ ಪುತ್ರ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.