×
Ad

ಕರೋಪಾಡಿ ಗ್ರಾಪಂ ಉಪಚುನಾವಣೆ : ಶೇಕಡ 80.69ರಷ್ಟು ಮತದಾನ

Update: 2017-07-02 20:25 IST

ಬಂಟ್ವಾಳ, ಜು. 2: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಎ.ಅಬ್ದುಲ್ ಜಲೀಲ್‌ರವರ ಹತ್ಯೆಯಿಂದ ತೆರವಾಗಿದ್ದ ಕರೋಪಾಡಿ ಗ್ರಾಮ ಪಂಚಾಯತ್‌ನ ಮಿತ್ತನಡ್ಕ ವಾರ್ಡ್‌ಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶೇಕಡ 80.69ರಷ್ಟು ಮತದಾನವಾಗಿದೆ.

ವಾರ್ಡ್‌ನಲ್ಲಿ ಒಟ್ಟು 979 ಮತದಾರರಿದ್ದು, 517 ಪುರುಷ ಮತದಾರರ ಪೈಕಿ 400 ಮಂದಿ, 462 ಮಹಿಳಾ ಮತದಾರರ ಪೈಕಿ 390 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ತಾಲೂಕು ಚುನಾವಣಾಧಿಕಾರಿಯಾದ ತಹಶೀಲ್ದಾರ್ ಕಚೇರಿಯ ಪ್ರಕಟನೆ ತಿಳಿಸಿದೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮೃತ ಅಬ್ದುಲ್ ಜಲೀಲ್ ಕರೋಪಾಡಿಯ ಸಹೋದರ ಅನ್ವರ್ ಕರೋಪಾಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಭಟ್ ಕೋಡ್ಲುರವರ ನಡುವೆ ಹಣಾಹಣಿ ನಡೆದಿದೆ.

ಮಿತ್ತನಡ್ಕ ಸರಕಾರಿ ಶಾಲೆಯಲ್ಲಿ ಮತದಾನವಾಗಿದ್ದು ಮತದಾನ ಕೇಂದ್ರದ ಎದುರು ಹಾಗೂ ಕನ್ಯಾನದಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ತುಕಡಿ ಸಹಿತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜುಲೈ 5ರಂದು ಬಂಟ್ವಾಳ ತಾಲೂಕು ಕಚೇರಿಯ ಚುನಾವಣಾ ಶಾಖೆಯಲ್ಲಿ ಮತಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News