ವೀಣಾ ವರ್ಷ ವೈಭವ: 25 ಮಂದಿಯಿಂದ ವೀಣಾ ವಾದನ

Update: 2017-07-02 15:41 GMT

ಉಡುಪಿ, ಜು.2: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಮಣಿಪಾಲದ ಡಾ.ಪಳ್ಳತ್ತಡ್ಕ ಕೇಶವ ಭಟ್ ಸ್ಮಾರಕ ಟ್ರಸ್ಟ್ ಪ್ರಸ್ತುತ ಪಡಿಸಿದ ಮಣಿಪಾಲದ ಕಲಾಸ್ಪಂದನದ 22ನೆಯ ವಾರ್ಷಿಕೋತ್ಸವ ‘ವೀಣಾ ವರ್ಷ ವೈಭವ’ದಲ್ಲಿ 25 ವೀಣಾ ವಾದಕರು ಏಕಕಾಲದಲ್ಲಿ ವೀಣೆ ಯನ್ನು ನುಡಿಸಿದರು.

ಮಠದ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷೆ ದೇವಕಿ ಕೆ.ಭಟ್ ವಹಿಸಿದ್ದರು.
ಸರೋಜಾ ಆರ್.ಆಚಾರ್, ಡಾ.ಅನಸೂಯ ದೇವಿ, ಡಾ.ಬಾಲಚಂದ್ರ ಆಚಾರ್, ವೀಣಾ ಶಿಕ್ಷಕಿ ಪವನ ಆಚಾರ್ ಉಪಸ್ಥಿತರಿದ್ದರು.

ಇದೇ ಸಂದರ್ಭ ದಲ್ಲಿ 16ವರ್ಷ ಪ್ರಾಯದ ರಮಣ ಬಾಲಚಂದ್ರನ್ ವೀಣಾ ವಾದನ ಕಛೇರಿಯನ್ನು ನಡೆಸಿಕೊಟ್ಟರು.
ಎಂ.ರಾಮದಾಸ ಆಚಾರ್ಯ ಸಾಮಗನ, ಪವನ ಆಚಾರ್ ವೀಣಾ ಸುಧೆ, ವೀಣಾ, ವೇಣು, ವಯಲಿನ್‌ನ್ನು ಅರ್ಜುನ್, ಡಾ.ಬಾಲಕೃಷ್ಣನ್, ವೈಭವ್ ನುಡಿಸಿದರು. ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ‘ಶ್ರೀಕೃಷ್ಣನ ಆಗಮನ’ ಯಕ್ಷ ನೃತ್ಯಕ್ಕೆ ವೀಣಾವಾದನ ಪ್ರಯೋಗ ನಡೆಯಿತು. ರತನ್ ಸಾಮಗ ನರ್ತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News