×
Ad

ನೀಟ್ ಪ್ರವೇಶಾತಿ: ನಾಳೆಯಿಂದ ನೋಂದಣಿ ಆರಂಭ

Update: 2017-07-02 21:27 IST

ಹೊಸದಿಲ್ಲಿ,ಜು.2: ಜೂನ್ 23ರಂದು ಪ್ರಕಟವಾದ ನೀಟ್ ಪರೀಕ್ಷೆಯ ಫಲಿತಾಂಶಗಳನ್ನು ಆಧರಿಸಿ ಅಖಿಲ ಭಾರತ ವೈದ್ಯಕೀಯ ಕಾಲೇಜುಗಳ ಪ್ರವೇಶಾತಿ ಕುರಿತ ಕೌನ್ಸೆಲಿಂಗ್‌ಗಾಗಿ ಸೋಮವಾರದಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ವೈದ್ಯಕೀಯ ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ಅನುಗುಣವಾಗಿ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ)ಯನ್ನು ರಚಿಸಿದೆ.

ಮೇ 7ರಂದು ನಡೆದ 2017ರ ಸಾಲಿನ ನೀಟ್ ಪರೀಕ್ಷೆಗೆ 10,90,085 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ ಒಟ್ಟು 6,11,539 ಮಂದಿ ಉತ್ತೀರ್ಣರಾಗಿದ್ದರು.

 cbseneet.nic.in   ನೀಟ್ ಪರೀಕ್ಷೆಯಲ್ಲಿ ತಮಗೆ ದೊರೆತ ರ್ಯಾಂಕ್ ಆಧಾರದಲ್ಲಿ ಅಖಿಲ ಭಾರತ ಖೋಟಾದಡಿ ಪ್ರವೇಶ ಪಡೆಯಲು ಅರ್ಹರಾದ ವಿದ್ಯಾರ್ಥಿಗಳು ಈ ಆನ್‌ಲೈನ್ ಕೌನ್ಸೆಲಿಂಗ್‌ಗೆ ಅರ್ಹರಾಗಿದ್ದಾರೆ (ಆಂಧ್ರ, ತೆಲಂಗಾಣ ಹಾಗೂ ಜಮ್ಮುಕಾಶ್ಮೀರ ಹೊರತುಪಡಿಸಿ). ಅರ್ಹ ಅಭ್ಯರ್ಥಿಗಳು ವಿಳಾಸದ ಮೂಲಕ ಫಲಿತಾಂಶ ಹಾಗೂ ತಮ್ಮ ರ್ಯಾಂಕ್ ವಿವರಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ.

  ಮೊದಲ ಸುತ್ತಿನ ಸೀಟು ವಿತರಣೆ ಪ್ರಕ್ರಿಯೆ ಜುಲೈ 13ರಿಂದ ಜುಲೈ 14ರವರೆಗೆ ನಡೆಯಲಿದ್ದು, ಜುಲೈ 15ರಂದು ಫಲಿತಾಂಶ ಪ್ರಕಟವಾಗಲಿದೆ.

ಎರಡನೆ ಸುತ್ತಿನ ಸೀಟು ವಿತರಣೆ ಪ್ರಕ್ರಿಯೆ ಆಗಸ್ಟ್ 5ರಿಂದ ಆಗಸ್ಟ್ 7ರವರೆಗೆ ನಡೆಯಲಿದ್ದು ಆಗಸ್ಟ್ 8ರಂದು ಫಲಿತಾಂಶ ಪ್ರಕಟವಾಗಲಿದೆ.

  www.nic.in ಶೇ.15ರಷ್ಟು ಅಖಿಲ ಭಾರತ ಖೋಟಾ ಸೀಟುಗಳ ಕೌನ್ಸೆಲಿಂಗ್‌ನ್ನು ಕೇಂದ್ರ ಸರಕಾರದ ಸಾರ್ವತ್ರಿಕ ಆರೋಗ್ಯ ಸೇವೆಗಳ ನಿರ್ದೇಶನಾಲಯವು ನಡೆಸಲಿದೆ. ಈ ಬಗ್ಗೆ ವಿವರಗಳಿಗಾಗಿ ವೆಬ್‌ಸೈಟ್ ಸಂರ್ಶಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News