ವಿಶ್ವಸಂಸ್ಥೆ ಭಾರತದ ಮಾಜಿ ರಾಯಭಾರಿ ನಿರುಪಮ್ ಸೇನ್ ನಿಧನ
Update: 2017-07-02 23:35 IST
ಹೊಸದಿಲ್ಲಿ, ಜು.2: ವಿಶ್ವಸಂಸ್ಥೆಯ ಭಾರತದ ಮಾಜಿ ಪ್ರತಿನಿಧೆ ನಿರುಪಮ ಸೇನ್ ಹೊಸದಿಲ್ಲಿಯಲ್ಲಿ ರವಿವಾರ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.
ವಿಜಯ್ ಕೆ. ನಂಬಿಯಾರ್ ಉತ್ತರಾಧಿಕಾರಿಯಾಗಿ ನೇಮಕರಾಗಿದ್ದ ಅವರು 2004 ಸೆಪ್ಟಂಬರ್‌ನಿಂದ 2009 ಮಾರ್ಚ್ ವರೆಗೆ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿದ್ದರು. ನಿವೃತ್ತಿಯ ಬಳಿಕ ಅವರು ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷರ ವಿಶೇಷ ಹಿರಿಯ ಸಲಹಾಗಾರರಾಗಿ ನಿಯೋಜಿತರಾಗಿದ್ದರು. ಸೇನ್ ಅವರು ಶ್ರೀಲಂಕಾ, ಬಲ್ಗೇರಿಯಾ ಹಾಗೂ ನಾರ್ವೆಯ ರಾಯಭಾರಿಯಾಗಿ ಕೂಡಾ ಕಾರ್ಯನಿರ್ವಹಿಸಿದ್ದರು.