ಜು.5: ಸಾರ್ವಜನಿಕ ಈದ್ ಸೌಹಾರ್ದ ಕೂಟ
Update: 2017-07-03 18:56 IST
ಉಪ್ಪಿನಂಗಡಿ, ಜು.3: ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ವತಿಯಿಂದ ಸಾರ್ವಜನಿಕ ಈದ್ ಸೌಹಾರ್ದ ಕೂಟವನ್ನು ಉಪ್ಪಿನಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.5ರಂದು ಸಂಜೆ 4:30ಕ್ಕೆ ಹಮ್ಮಿಕೊಂಡಿದೆ.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸೌಹಾರ್ದ ಸಂದೇಶವನ್ನು ನೀಡಲಿದ್ದಾರೆ. ಶಾಸಕಿ ಶಕುಂತಳಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಕ್ಬರ್ ಅಲಿ ಉಡುಪಿ ಅಧ್ಯಕ್ಷತೆ ವಹಿಸುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.