×
Ad

ದಿಲ್ಲಿ ಸ್ಪೀಕರ್‌ಗೆ ‘ಧೃತರಾಷ್ಟ್ರ’ ಎಂದ ಮಿಶ್ರಾಗೆ ಸದನದಿಂದ ಗೇಟ್‌ಪಾಸ್

Update: 2017-07-03 19:14 IST

ಹೊಸದಿಲ್ಲಿ,ಜು.3: ದಿಲ್ಲಿ ಸ್ಪೀಕರ್ ರಾಮನಿವಾಸ್ ಗೋಯೆಲ್ ಅವರನ್ನು ಸೋಮವಾರ ‘ಧೃತರಾಷ್ಟ್ರ ’ಎಂದು ಪ್ರಸ್ತಾಪಿಸಿದ ಬಂಡುಕೋರ ಆಪ್ ಶಾಸಕ ಕಪಿಲ್ ಮಿಶ್ರಾ ಅವರನ್ನು ಮಾರ್ಷಲ್‌ಗಳು ಸದನದಿಂದ ಹೊರದಬ್ಬಿದರು. ಇದರೊಂದಿಗೆ ಮೇ ತಿಂಗಳಿನಿಂದೀಚಿಗೆ ಮೂರನೇ ಬಾರಿಗೆ ಮಿಶ್ರಾ ಸದನದಿಂದ ಹೊರದಬ್ಬಲ್ಪಟ್ಟಿದ್ದಾರೆ.

ಮೂವರು ಆಪ್ ಶಾಸಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆಪ್ ಸ್ವಯಂಸೇವಕಿ ಸಿಮ್ರನ್ ಕೌರ್ ದೂರಿಕೊಂಡಿದ್ದು, ಆಕೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮಾಜಿ ಸಚಿವರೂ ಆಗಿರುವ ಮಿಶ್ರಾ ಕಳೆದ ವಾರ ಸ್ಪೀಕರ್‌ಗೆ ಪತ್ರ ಬರೆದಿದ್ದರು. ಈ ಬಗ್ಗೆ ಸ್ಪೀಕರ್ ಯಾವದೇ ಕ್ರಮ ಕೈಗೊಂಡಿರಲಿಲ್ಲ.

ಇದರಿಂದ ಕುಪಿತ ಮಿಶ್ರಾ‘ನೀವು ಧೃತರಾಷ್ಟ್ರನಂತೆ ನನ್ನ ಪತ್ರದ ಮೇಲೇಕೆ ಕುಳಿತಿದ್ದೀರಿ’ಎಂದು ಸ್ಪೀಕರ್ ಗೋಯೆಲ್‌ರನ್ನು ಪ್ರಶ್ನಿಸಿದ್ದು ಅವರನ್ನು ಹೊರಕ್ಕೆ ದಬ್ಬಲು ಕಾರಣವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News