ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕನ್ನಡ ಪತ್ರಿಕಾ ದಿನಾಚರಣೆ
ಮಂಜೇಶ್ವರ, ಜು.3 ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪಾಡಿ ಅಧ್ಯಕ್ಷತೆ ವಹಿಸಿದರು. ಹಿರಿಯ ಪತ್ರಕರ್ತ, ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು ನವ ಮಾಧ್ಯಮಗಳ ಪೈಪೋಟಿಯ ನಡುವೆಯೂ ಆಶೆಯನ್ನು ಜೀವಂತವಾಗಿರಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾದುದು. ಆಧುನಿಕ ವಿದ್ಯುನ್ಮಾನ ಯುಗದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕುಂಟಿದಗೊಂಡಿಲ್ಲ, ನೈಜ ಸುದ್ದಿಗಳನ್ನು ಪ್ರಕಟಿಸುವ ಮೂಲಕ ವಿಶ್ವಾಸಾರ್ಹತೆಯನ್ನು ಬೆಳೆಸಿಕೊಂಡ ಏಕೈಕ ಮಾಧ್ಯಮವಾಗಿ ಪತ್ರಿಕೆ ಮೂಡಿ ಬಂದಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ, ನಾಗರಿಕತೆಯನ್ನು ಪತ್ರಿಕೆಗಳು ಜೀವಂತವಾಗಿರಿಸುತ್ತದೆಯೆಂದು ಹೇಳಿದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ರಹಿಮಾನ್ ಉದ್ಯಾವರ ಸ್ವಾಗತಿಸಿದರು. ಪತ್ರಕರ್ತರಾದ ಸನಲ್ ಕುಮಾರ್, ಸಲಾಂ ವರ್ಕಾಡಿ, ಛಾಯಾಗ್ರಾಹಕ ದೀಪಕ್ ಉಪ್ಪಳ ಉಪಸ್ಥಿತರಿದ್ದರು. ರತನ್ ಕುಮಾರ್ ವಂದಿಸಿದರು.