ಜುಲೈ 12: ರಾಷ್ಟ್ರಾದ್ಯಂತ ಬಂದ್‌ಗೆ ಪೆಟ್ರೋಲ್ ಪಂಪ್ ಮಾಲಕರ ಕರೆ

Update: 2017-07-03 15:46 GMT

ಹೊಸದಿಲ್ಲಿ, ಜು. 3: ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯನಂತಹ ತೈಲ ಮಾರುಕಟ್ಟೆ ಕಂಪೆನಿಗಳು ಪೆಟ್ರೋಲ್ ಪಂಪ್‌ಗಳಲ್ಲಿ ಶೇ. 100 ಸ್ವಯಂಚಾಲನೆ ವ್ಯವಸ್ಥೆ ಅಳವಡಿಸಲು ವಿಫಲವಾಗಿರುವುದು ಹಾಗೂ ದಿನ ಆಧರಿತ ಬೆಲೆ ಮಾದರಿಯಲ್ಲಿ ಪಾರದರ್ಶಕತೆ ಕೊರತೆ ವಿರೋಧಿಸಿ ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಅಸೋಸಿಯೇಷನ್ ಜುಲೈ 12ರಂದು ರಾಷ್ಟಾದ್ಯಂತ ಬಂದ್‌ಗೆ ಕರೆ ನೀಡಿದೆ.

ನಮ್ಮ ರಾಷ್ಟ್ರೀಯ ಸಂಘಟನೆಯಾದ ಎಐಪಿಡಿಎ ಜುಲೈ 12ರಂದು ರಾಷ್ಟ್ರಾದ್ಯಂತ ಬಂದ್‌ಗೆ ಕರೆ ನೀಡಿದೆ. ಅದಕ್ಕಿಂತ ಮುಂಚಿತವಾಗಿ ಜುಲೈ 5ರಿಂದ ನಾವು ಯಾವುದೇ ತೈಲವನ್ನು ಖರೀದಿಸುವುದಿಲ್ಲ ಎಂದು ಪಶ್ಚಿಮ ಬಂಗಾಳದ ಪೆಟ್ರೋಲಿಯಂ ವಿತರಕರ ಅಸೋಸಿಯೇಶನ್‌ನ ಅಧ್ಯಕ್ಷ ತುಷಾರ್ ಸೇನ್ ತಿಳಿಸಿದ್ದಾರೆ.

ದಿನ ಆಧರಿತ ಬೆಲೆ ವ್ಯವಸ್ಥೆ ಪರಿಚಯಿಸಿದ ಬಳಿಕ ಪೆಟ್ರೋಲಿಯಂ ಬೆಲೆ ಇಳಿಮುಖವಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲ ಕತ್ತಲಲ್ಲಿ ಇದ್ದಂತಿದ್ದೇವೆ. ಸಣ್ಣ ವಿತರಕರು ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ದಿನ ಆಧರಿತ ಬೆಲೆ ಮಾದರಿಯನ್ನು ಜೂನ್ 16ರಂದು ಆರಂಭಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News