×
Ad

ಜಮಾಅತೆ ಇಸ್ಲಾಮೀ ಹಿಂದ್‌ನಿಂದ ರೇಷನ್, ಈದ್ ಕಿಟ್, ಫಿತ್ರ್ ಝಕಾತ್ ವಿತರಣೆ

Update: 2017-07-03 20:43 IST

ಮಂಗಳೂರು, ಜು.3: ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲೆಯ ಮಂಗಳೂರು, ಬೆಂಗರೆ, ಉಳ್ಳಾಲ, ಎಡಪದವು, ವಾಮಂಜೂರು, ಬಂಟ್ವಾಳ, ಬಿ.ಸಿ.ರೋಡ್, ಪಾಣೆಮಂಗಳೂರು, ವಿಟ್ಲ, ಸುಳ್ಯ, ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿ ಶಾಖೆ ಹಾಗೂ ವರ್ತುಲಗಳ ಮೇಲ್ನೋಟದಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಈ ಬಾರಿ ರಮಝಾನ್ ರೇಷನ್, ಫಿತ್ರ್ ಝಕಾತ್ ಹಾಗೂ ಈದ್ ಕಿಟ್ ಅನ್ನು ವಿತರಿಸಲಾಯಿತು.

ದ.ಕ. ಜಿಲ್ಲೆಯ 1,003 ಕುಟುಂಬಗಳಿಗೆ 17,27,750 ರೂ. ಮೌಲ್ಯದ ರಮಝಾನ್ ರೇಷನ್ ಕಿಟ್, 6,520 ಅರ್ಹ ಬಡ ಕುಟುಂಬಗಳಿಗೆ 9,77,836 ರೂ. ವೆಚ್ಚದಲ್ಲಿ ಫಿತ್ರ್ ಝಕಾತ್, 70,500 ರೂ. ವೆಚ್ಚದಲ್ಲಿ 144 ಕುಟುಂಬಗಳಿಗೆ ಈದ್ ಕಿಟ್ ಅನ್ನು ವಿತರಿಸಲಾಗಿದೆ. ಜೊತೆಗೆ ಕಿಡ್ನಿ ರೋಗಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ 270 ಡಯಾಲಿಸಿಸ್‌ಗೆ ಸುಮಾರು 2,70,000 ರೂ.ವನ್ನು ನೀಡಿದೆ. ಅಲ್ಲದೆ, 33 ಕುಟುಂಬಗಳಿಗೆ 16,500 ರೂ. ವೆಚ್ಚದ ಇಫ್ತಾರ್ ಕಿಟ್ ಮತ್ತು 6 ರೋಗಿಗಳ ಕುಟುಂಬಕ್ಕೆ 38,500 ರೂ.ನಷ್ಟು ಆರ್ಥಿಕ ನೆರವನ್ನು ನೀಡಿದೆ.

ಒಟ್ಟು 31,01,086 ರೂ. ಹಣವನ್ನು ಬಡಜನರಿಗೆ ದಾನಿಗಳ ನೆರವಿನಿಂದ ನೀಡಿದೆ. ಜಮಾಅತೆ ಇಸ್ಲಾಮೀ ಹಿಂದ್‌ನ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲಾ ದಾನಿಗಳಿಗೆ ಆಭಾರಿಯಾಗಿರುವುದಾಗಿ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News