ಪುಸ್ತಕ ಮೇಳಕ್ಕೆ ಚಾಲನೆ
ಮಂಗಳೂರು, ಜು. 3: ಶಂಸುಲ್ ಉಲಮಾ ಪಬ್ಲಿಕೇಷನ್ ಮಂಗಳೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಂ.ಆರ್. ಬುಕ್ ಸ್ಟಾಲ್ ವತಿಯಿಂದ ಸಮಸ್ತ ಪುಸ್ತಕ ಮೇಳಕ್ಕೆ ಜು. 4ರಂದು ಬೆಳಗ್ಗೆ 9 ಗಂಟೆಗೆ ನಗರದ ಸ್ಟೇಟ್‌ಬ್ಯಾಂಕಿನ ಪೊಯಿನೀರ್ ಕಾಂಪ್ಲೆಕ್ಸ್‌ನ ಎರಡನೆ ಮಹಡಿಯಲ್ಲಿ ಚಾಲನೆ ದೊರೆಯಲಿದೆ.
ಚಿಕ್ಕಮಂಗಳೂರು ಜಿಲ್ಲಾ ಖಾಝಿ ಸಮಸ್ತ ಶಿಕ್ಷಣ ಮಂಡಳಿಯ ಕೇಂದ್ರೀಯ ಕಾರ್ಯದರ್ಶಿ ಶೈಖುನಾ ಹಾಜಿ ಎಂ. ಎ. ಖಾಸಿಂ ಉಸ್ತಾದ್ ಪುಸ್ತಕ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಪುಸ್ತಕ ಮೇಳದಲ್ಲಿ ಮದ್ರಸ ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಉಪಯುಕ್ತವಾದ ಎಲ್ಲಾ ಸಾಮಗ್ರಿಗಳು ಲಭ್ಯವಿದೆ. 75ಲಕ್ಷಕ್ಕಿಂತಲೂ ಮಿಕ್ಕಿದ ಮದರಸ ಗ್ರಂಥಗಳು ಹಾಗೂ ಸಾಮಗ್ರಿಗಳು ಲಭ್ಯವಿದೆ.
ಸಚಿವ ಯು.ಟಿ. ಖಾದರ್, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಂ ಅಧ್ಯಕ್ಷ ಕೆ. ಎಲ್. ಉಮರ್ ದಾರಿಮಿ, ಜಿಲ್ಲಾ ಎಸ್ಕೆಎಸೆಸೆಫ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ, ಜಿಲ್ಲಾ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಕರ್ನಾಟಕ ಇಸ್ಲಾಮ್ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹಾಜಿ ಕೆ. ಎಸ್. ಹೈದರ್ ದಾರಿಮಿ, ನೌಷಾದ್ ಹಾಜಿ ಸೂರಲ್ಪಾಡಿ, ಸಿತಾರ್ ಮಜೀದ್ ಹಾಜಿ, ಅಬ್ದುಲ್ಲ ಹಾಜಿ ಬೆಳ್ಮ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.