×
Ad

ಕಾಸರಗೋಡು: 250ಕ್ಕೂ ಅಧಿಕ ಕಾರ್ಯಕರ್ತರು ಸಿಪಿಎಂ ಗೆ ಸೇರ್ಪಡೆ

Update: 2017-07-03 21:02 IST

ಕಾಸರಗೋಡು, ಜು. 3: ಮುಸ್ಲಿಂ ಲೀಗ್ ಮಾಜಿ ಜಿಲ್ಲಾ ಕಾರ್ಯದರ್ಶಿ  ಕೆ.ಕೆ. ಅಬ್ದುಲ್ಲ ಕು೦ಞ ಸೇರಿದಂತೆ  250 ಕ್ಕೂ ಅಧಿಕ ಕಾರ್ಯ ಕರ್ತರು ಸಿಪಿಎಂ ಗೆ ಸೇರ್ಪಡೆಗೊಳ್ಳುವುದಾಗಿ ಮುಖಂಡರು ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು. ಜು. 5ರಂದು ಸಂಜೆ 4 ಗಂಟೆಗೆ ಕುಂಬಳೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಿಪಿಎಂ  ರಾಜ್ಯ ಕಾರ್ಯದರ್ಶಿ  ಕೊಡಿಯೇರಿ ಬಾಲಕೃಷ್ಣನ್ ರವರು ಕಾರ್ಯಕರ್ತರನ್ನು ಪಕ್ಷಕ್ಕೆ  ಬರಮಾಡಿಕೊಳ್ಳುವರು.

ಮುಸ್ಲಿಂ ಲೀಗ್ ಪಕ್ಷದ  ನೀತಿಯನ್ನು ಪ್ರತಿಭಟಿಸಿ  ಪಕ್ಷ  ತೊರೆದು ಸಿಪಿಎಂ ಗೆ ಸೇರ್ಪಡೆಗೊಳ್ಳುತ್ತಿರುವುದಾಗಿ  ಕೆ ಕೆ ಅಬ್ದುಲ್ಲ ಕು೦ಞ   ಹೇಳಿದರು. ಶ್ರೀಮಂತ, ಮರಳು ಹಾಗೂ ಇನ್ನಿತರರ  ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.  ಇದರಿಂದ ಬೇಸತ್ತು  ಪಕ್ಷ ತೊರೆದಿರುವುದಾಗಿ ಅವರು ಹೇಳಿದರು. ಕೋಮುವಾದ ವಿರುದ್ಧ ಹೋರಾಡಲು ಮುಸ್ಲಿಂ ಲೀಗ್ ವಿಫಲಗೊಂಡಿದೆ. ಕೇಂದ್ರ ಸರಕಾರ ಅಲ್ಪಸಂಖ್ಯಾತ ವಿರೋಧಿ ತಳೆಯುತ್ತಿದ್ದರೂ ಮುಸ್ಲಿಂ ಲೀಗ್  ಮೌನವಾಗಿದೆ ಎಂದು ಕೆ.ಕೆ ಅಬ್ದುಲ್ಲ ಕು೦ಞ  ಈ ಸಂದರ್ಭ ಹೇಳಿದರು. 
ಕೆ.ಕೆ ಅಬ್ದುಲ್ಲ ಕು೦ಞ  ಅಲ್ಲದೆ  ಎಂ.ಎ. ಮುನ್ನೂರು, ಮುಹಮ್ಮದ್, ಮುಸ್ತಫಾ ಉಪ್ಪಳ ಮೊದಲಾದವರು  ಪಕ್ಷಕ್ಕೆ ರಾಜೀನಾಮೆ ನೀಡಿದವರಲ್ಲಿ ಸೇರಿದ್ದಾರೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News