ಭಾರತದಿಂದ ಸಮೀಪ ವ್ಯಾಪ್ತಿಯ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ

Update: 2017-07-03 16:29 GMT

ಬಾಲಸೂರ್, ಜು. 3: ಭಾರತ ಒರಿಸ್ಸಾ ಕರಾವಳಿಗುಂಟ ಇರುವ ಪರೀಕ್ಷಾ ವಲಯದಿಂದ ದೇಶೀ ನಿರ್ಮಿತ ತ್ವರಿತ ಪ್ರತಿಕ್ರಿಯಿಸುವ ನೆಲದಿಂದ ನೆಲಕ್ಕೆ ಚಿಮ್ಮುವ, ಸಮೀಪ ವ್ಯಾಪ್ತಿಯ ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾಯಿಸಲಾಯಿತು. ಬಾಲಸೂರ್ ಸಮೀಪದ ಚಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದ ಸಂಕೀರ್ಣ 3ರಲ್ಲಿರುವ ಉಡಾವಣಾ ವಾಹನದಿಂದ ಈ ಅತ್ಯಾಧುನಿಕ ಕ್ಷಿಪಣಿಯನ್ನು 11.25ರ ಹೊತ್ತಿಗೆ ಪರೀಕ್ಷಾರ್ಥ ಉಡಾಯಿಸಲಾಯಿತು. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ (ಡಿಆರ್‌ಡಿಒ) ಹಾಗೂ ಇತರ ಸಂಸ್ಥೆಗಳು ಈ ಕ್ಷಿಪಣಿ ಅಭಿವೃದ್ಧಿಗೊಳಿಸಿವೆ. 2017 ಜೂನ್ 17ರಂದು ಇದೇ ವಲಯದಿಂದ ಈ ಕ್ಷಿಪಣಿಯನ್ನು ಮೊದಲ ಬಾರಿಗೆ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು. ಈ ಕ್ಷಿಪಣಿ 25ರಿಂದ 30 ಕಿ.ಮೀ. ದೂರ ಕ್ರಮಿಸಿ ದಾಳಿ ನಡೆಸುವ ಹಾಗೂ ಬಹು ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News