×
Ad

ವಾಮಂಜೂರು ಪಿಲಿಕುಲ ನಿವಾಸಿಗಳಲ್ಲಿ ಆತಂಕ

Update: 2017-07-03 22:17 IST

ವಾಮಂಜೂರು, ಜು. 3: ಹೆದ್ದಾರಿಯಿಂದ ತೆರವುಗೊಳಿಸಲ್ಪಟ್ಟ ಮದ್ಯದಂಗಡಿಗಳು ವಾಮಂಜೂರು ಪಿಲಿಕುಲ ರಸ್ತೆಯತ್ತ ವಾಲಿಕೊಳ್ಳುತ್ತಿರುವುದು ಇದೀಗ ಸ್ಥಳೀಯ ನಿವಾಸಿಗಳ ಆತಂಕಕ್ಕೆ ಕಾರಣವಾಗುತ್ತಿದೆ.

ಪಿಲಿಕುಲ ವಿಹಾರಕೇಂದ್ರ, ಹತ್ತಿರದಲ್ಲೇ ಪೊಲೀಸ್ ಠಾಣೆಗಳಿರುವ ವಾಮಂಜೂರು ಪಿಲಿಕುಳ ರಸ್ತೆಯಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿರುವ ಮದ್ಯದಂಗಡಿಯ ಖಾಯಂ ಗಿರಾಕಿಗಳು ರಸ್ತೆಯುದ್ದಕ್ಕೂ ಅಡ್ಡಾ ದಿಡ್ಡಿಯಾಗಿ ಹೊರಳಾಡಿ, ಸಾರ್ವಜನಿಕ ಪ್ರದೇಶವನ್ನೇ ಮೂತ್ರವಿಸರ್ಜನೆಗೆ ಬಳಸಿ, ವಾಂತಿ ಮಾಡಿ, ಶುಚಿತ್ವವನ್ನು ಕಡೆಗಣಿಸುತ್ತಿರುವ  ಕುಡುಕರ ಹಾವಳಿಯಿಂದ ಸ್ಥಳೀಯ ನಿವಾಸಿಗಳ ನೆಮ್ಮದಿಗೆ ಭಗ್ನವಾಗಿದೆ. 

ಇದೀಗ ಹೆದ್ದಾರಿಯಿಂದ ತೆರವುಗೊಳಿಸಲ್ಪಟ್ಟ ಮದ್ಯದಂಗಡಿಗಳು ವಾಮಂಜೂರು ಪಿಲಿಕುಳ ರಸ್ತೆಯನ್ನು ಮತ್ತೆಯೂ ಆಶ್ರಯಿಸಿಕೊಳ್ಳುತ್ತಿರು ವುದರ ವಿರುದ್ಧ ಆಕ್ರೋಶವನ್ನು ಪ್ರಕಟಿಸುತ್ತಿದ್ದಾರೆ. ಪಿಲಿಕುಲ ವಿಹಾರದಾಮ, ಗೊಲ್ಫ್ ಮೈದಾನಗಳಿಂದ ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡ ಪಿಲಿಕುಲ- ವಾಮಂಜೂರು ರಸ್ತೆಯುದ್ದಕ್ಕೂ ಮದ್ಯದಂಗಡಿಗಳಿಗೆ ಅನುವು ಮಾಡಿಕೊಟ್ಟರೆ ಸ್ಥಳೀಯ ನಿವಾಸಿಗಳು, ಮಹಿಳೆಯರು, ಶಾಲಾಮಕ್ಕಳು, ಸಭ್ಯ ನಾಗರಿಕರು ಮನೆಯಿಂದ ಹೊರಗಿಳಿಯುವುದು ಹೇಗೆ? ಎನ್ನುವುದು ಸ್ಥಳೀಯರ ಆತಂಕವಾಗಿದೆ.
ಸಂಬಂದಪಟ್ಟವರು, ಜನಪ್ರತಿನಿದಿಗಳು ಇದರ ಕುರಿತು ಗಮನಹರಿಸದಿದ್ದರೆ ಸ್ಥಳೀಯ ನಿವಾಸಿಗಳು ಒಟ್ಟು ಸೇರಿಕೊಂಡು ತೀವ್ರ ಸ್ವರೂಪದ ಪ್ರತಿಭಟನೆಯ ಮೊರೆ ಹೋಗುವ ಸಿದ್ದತೆಯಲ್ಲಿರುವುದಾಗಿಯೂ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News