×
Ad

ನಗರಸಭೆ ಹಲ್ಲೆ ಖಂಡಿಸಿ ಕಡಿಯಾಳಿ ನಾಗರಿಕರಿಂದ ಧರಣಿ

Update: 2017-07-03 22:38 IST

ಉಡುಪಿ, ಜು.3: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಡಿಯಾಳಿ ವಾರ್ಡ್‌ನ ನಗರಸಭೆ ಸದಸ್ಯೆ ಗೀತಾ ಶೇಟ್ ಹಾಗೂ ನಾಗರಿಕ ರೋನಿ ಡಿ ಮೆಲ್ಲೊ ಮೇಲಿನ ಹಲ್ಲೆಯನ್ನು ಖಂಡಿಸಿ ಕಡಿಯಾಳಿ ನಾಗರಿಕರಿಂದ ಮಂಗಳ ವಾರ ಕಡಿಯಾಳಿಯಲ್ಲಿ ಧರಣಿ ನಡೆಸಲಾಯಿತು.

ಸದಸ್ಯೆ ಗೀತಾ ಶೇಟ್ ಮಾತನಾಡಿ, ಅಧ್ಯಕ್ಷರ ಅನುಮತಿ ಪಡೆದು ರಾನಿ ಅವರನ್ನು ಸದನಕ್ಕೆ ಕರೆದಿದ್ದೆ. ಅಧ್ಯಕ್ಷರು ಹಾಗೂ ಪೌರಾಯುಕ್ತರ ಎದುರಿನಲ್ಲಿಯೇ ಮೈಕ್ ಪಡೆದು ರಾನಿಗೆ ನೀಡಿದ್ದೆ. ಆದರೂ ಅವರ ಮೇಲೆ ಹಲ್ಲೆ ಮಾಡಲಾಗಿದೆ. ವಿರೋಧ ಪಕ್ಷದವರು ಇಲ್ಲದಿದ್ದರೆ ರಾನಿಯ ಜೀವಕ್ಕೆ ಅಪಾಯ ಆಗುತ್ತಿತ್ತು. ಇದಕ್ಕೆ ನಾನೇ ನೇರ ಹೊಣೆಯಾಗುತ್ತಿದ್ದೆ. ಹಲ್ಲೆ ನಡೆಸಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಒತ್ತಾಯಿಸಿದರು.

ಹಲ್ಲೆಗೆ ಒಳಗಾದ ರಾನಿ ಡಿಮೆಲ್ಲೋ ಮಾತನಾಡಿ, ಇದು ಯೋಜಿತ ಹಲ್ಲೆ ಯಾಗಿದೆ. ನಾನು ಯಾವುದೇ ತಪ್ಪು ಮಾಡದಿದ್ದರೂ ವಿನಾಕಾರಣ ಹಲ್ಲೆ ಮಾಡ ಲಾಗಿದೆ. ಇವರಿಗೆ ಕಠಿಣ ಶಿಕ್ಷೆಯಾಗಬೇಕು. ಅಲ್ಲಿಯವರೆಗೆ ಹೋರಾಟ ಮಾಡ ಲಾಗುವುದು. ಮುಂದೆ ಈ ರೀತಿ ಯಾರಿಗೂ ಅನ್ಯಾಯ ಆಗಬಾರದು ಎಂದು ಹೇಳಿದರು.

ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಈ ಪ್ರತಿಭಟನೆಗೆ ನಗರ ಸಭೆಯಿಂದ ಅನುಮತಿ ನಿರಾಕರಿಸಲಾಗಿದೆ. ಆದರೂ ಪ್ರತಿಭಟನೆ ನಡೆಸಿದ ನಾಗರಿಕರ ಮೇಲೆ ಎಫ್‌ಐಆರ್ ದಾಖಲಿಸಲು ಪೊಲೀಸರು ಯೋಜಿಸಿದ್ದಾರೆ. ಪೊಲೀಸರು ಅಮಾಯಕರ ಮೇಲೆ ಕೇಸು ದಾಖಲಿಸುವ ಬದಲು ನನ್ನ ಮೇಲೆ ಕೇಸು ದಾಖಲಿಸಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಳಕೆದಾರರ ವೇದಿಕೆಯ ಸಂಚಾಲಕ ದಾಮೋದರ್ ಐತಾಳ್, ಕಡಿಯಾಳಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಸಂತ ಭಟ್, ಕಡಿ ಯಾಳಿ ದೇವಸ್ಥಾನದ ಮಾಜಿ ಮೊಕ್ತೇಸರ ಶ್ರೀನಿವಾಸ ಉಪಾಧ್ಯಾಯ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News