ನೀಟ್ ಪರೀಕ್ಷೆ: ವಿದ್ಯೋದಯದ ಮೂವರಿಗೆ ರ್ಯಾಂಕ್

Update: 2017-07-03 17:50 GMT

ಉಡುಪಿ, ಜು.3: ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವಕಾಲೇಜಿನ ಮೂವರು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಲೇಜಿನ ಅತೀತ್ ಬಿ. ಶೆಟ್ಟಿ-4055ನೇ ರ್ಯಾಂಕ್(99.62 ಪರ್ಸೆಂಟೈಲ್ ಸ್ಕೋರ್), ರಿತಿಕಾ ಡಿ.-17059 (ಶೇ.98.4) ಹಾಗೂ ಗ್ರೀಷ್ಮಾ ಗಿರೀಶ್ 23342ನೇ(ಶೇ.97.84) ರ್ಯಾಂಕ್ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News