×
Ad

ನೀಟ್ ಫಲಿತಾಂಶ: ಎಕ್ಸ್‌ಪರ್ಟ್‌ಗೆ ಮೊದಲ 50ರಲ್ಲಿ ಐದು ರ್ಯಾಂಕ್

Update: 2017-07-04 17:31 IST

ಮಂಗಳೂರು, ಜು. 4: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯ ರಾಜ್ಯ ಮಟ್ಟದ ರ್ಯಾಂಕ್ ಘೋಷಣೆಯಾಗಿದ್ದು, ಮೊದಲ 50 ರ್ಯಾಂಕ್‌ನಲ್ಲಿ 5 ರ್ಯಾಂಕ್ ಹಾಗೂ ಮೊದಲ 100 ರ್ಯಾಂಕ್‌ಗಳಲ್ಲಿ 12 ರ್ಯಾಂಕ್‌ಗಳನ್ನು ಮಂಗಳೂರಿನ ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ಕಾಲೇಜಿನ 986 ವಿದ್ಯಾರ್ಥಿಗಳು ನೀಟ್ ಪ್ರವೇಶ ಪರೀಕ್ಷೆ ಬರೆದಿದ್ದು, ಇದರಲ್ಲಿ 925 (ಶೇ.94) ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ರಾಜ್ಯಮಟ್ಟದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪ್ರವೇಶಾತಿ ಸೀಟು ಹಂಚಿಕೆಯಲ್ಲಿ ಸಾಮಾನ್ಯ ವರ್ಗ, ಎಸ್‌ಸಿ, ಎಸ್‌ಟಿ, ಒಬಿಸಿ, ಹೈದರಾಬಾದ್ ಕರ್ನಾಟಕ ಹೀಗೆ ನಾನಾ ಕೋಟಾದಡಿ ಎಕ್ಸ್‌ಪರ್ಟ್‌ನ 455 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು ಖಚಿತವಾಗಿದೆ.

ಮೊದಲ 200 ರ್ಯಾಂಕ್‌ಗಳಲ್ಲಿ 23 ರ್ಯಾಂಕ್, ಮೊದಲ 300 ರ್ಯಾಂಕ್‌ಗಳಲ್ಲಿ 34 ರ್ಯಾಂಕ್, ಮೊದಲ 400 ರ್ಯಾಂಕ್‌ಗಳಲ್ಲಿ 45 ರ್ಯಾಂಕ್, ಮೊದಲ 500 ರ್ಯಾಂಕ್‌ಗಳಲ್ಲಿ 56 ರ್ಯಾಂಕ್, ಮೊದಲ 1000 ರ್ಯಾಂಕ್‌ಗಳಲ್ಲಿ 93 ರ್ಯಾಂಕ್, ಮೊದಲ 1500 ರ್ಯಾಂಕ್‌ಗಳಲ್ಲಿ 133 ರ್ಯಾಂಕ್, ಮೊದಲ 2000 ರ್ಯಾಂಕ್‌ಗಳಲ್ಲಿ 173 ರ್ಯಾಂಕ್, ಮೊದಲ 2500 ರ್ಯಾಂಕ್‌ಗಳಲ್ಲಿ 206 ರ್ಯಾಂಕ್, ಮೊದಲ 3000 ರ್ಯಾಂಕ್‌ಗಳಲ್ಲಿ 229 ರ್ಯಾಂಕ್, ಮೊದಲ 3500 ರ್ಯಾಂಕ್‌ಗಳಲ್ಲಿ 257 ರ್ಯಾಂಕ್, ಮೊದಲ 4000 ರ್ಯಾಂಕ್‌ಗಳಲ್ಲಿ 292 ರ್ಯಾಂಕ್, ಮೊದಲ 4500 ರ್ಯಾಂಕ್‌ಗಳಲ್ಲಿ 316 ರ್ಯಾಂಕ್, ಮೊದಲ 5000 ರ್ಯಾಂಕ್‌ಗಳಲ್ಲಿ 347 ರ್ಯಾಂಕ್‌ಗಳನ್ನು ಎಕ್ಸ್‌ಪರ್ಟ್‌ನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

 ಅತ್ಯುತ್ತಮ ರ್ಯಾಂಕ್ ವಿಜೇತರು:

ಸುಜಿತ್ ಎಸ್ 13ನೇ ರ್ಯಾಂಕ್, ರಜತ್ ಜೈನ್ ಎಸ್. 16ನೇ ರ್ಯಾಂಕ್, ರಶ್ಮಿ ಗಿರಿಧರ ಭಟ್ 20ನೇ ರ್ಯಾಂಕ್, ಪ್ರಾರ್ಥನಾ ಆರ್. 25ನೇ ರ್ಯಾಂಕ್, ಬಿ.ವೈ. ಪ್ರಜ್ವಲ್ 50ನೇ ರ್ಯಾಂಕ್, ಮೇಘಾ ಡಿ. 55ನೇ ರ್ಯಾಂಕ್, ಅನ್ನಪೂರ್ಣ ಪಿ 57ನೇ ರ್ಯಾಂಕ್, ತೇಜಸ್ವಿನಿ ಶೇಖರ್ 59ನೇ ರ್ಯಾಂಕ್, ರಚನಾ ಆರ್. 77ನೇ ರ್ಯಾಂಕ್, ಜೀವನ್ ಬಿ.ಆರ್. 82ನೇ ರ್ಯಾಂಕ್, ಜೋಶ್ನಾ ಶ್ರೀ ಎಂ. 84ನೇ ರ್ಯಾಂಕ್, ಮಾನಸ ಟಿ.ಕೆ. 85ನೇ ರ್ಯಾಂಕ್, ಪೂಜಿತಾ ಆರ್. 121ನೇ ರ್ಯಾಂಕ್, ಶಿವಾನಿ ಎಂ.ಡಿ. 128ನೇ ರ್ಯಾಂಕ್, ಪ್ರಜ್ವಲ್ ರವೀಂದ್ರ ದೇವರಾಡಿ 130ನೇ ರ್ಯಾಂಕ್, ಶಿವಾನಿ ಭಟ್ ಎಲ್. 132 ನೇ ರ್ಯಾಂಕ್, ಗಗನ್‌ದೀಪ್ ಬಿ.ಸಿ. 134ನೇ ರ್ಯಾಂಕ್, ಮೇಘನಾ ಸೋಮರಾಜ್ 167ನೇ ರ್ಯಾಂಕ್, ಅಂಜನಾ ಆರ್. 170ನೇ ರ್ಯಾಂಕ್, ಪ್ರತೀಕ್ ಎಂ.ಎಂ. 188ನೇ ರ್ಯಾಂಕ್, ಶಶಾಂಕ್ ಗೌಡ ಎ.ಎಸ್. 190ನೇ ರ್ಯಾಂಕ್, ಪೂರ್ವಾ ಶಿಂಧೆ 193ನೇ ರ್ಯಾಂಕ್, ಅನಿರುದ್ ಉಪಾಧ್ಯಾಯ 195ನೇ ರ್ಯಾಂಕ್, ಪ್ರೀಯಾ ಎಸ್. 212ನೇ ರ್ಯಾಂಕ್, ಸುಮಂತ್ ಟಿ.ಎಂ. 253ನೇ ರ್ಯಾಂಕ್, ಮಯೂರ್ ಎನ್.ಜಿ. 254ನೇ ರ್ಯಾಂಕ್, ನೀರಜ್ ಎನ್. ಎನ್. 268ನೇ ರ್ಯಾಂಕ್, ಶ್ರೇಷ್ಠಾ ಎಸ್. ಎಚ್. 272ನೇ ರ್ಯಾಂಕ್, ಅರ್ಜುನ್ ಪಿ. ನಂಬಿಯಾರ್ 280ನೇ ರ್ಯಾಂಕ್, ಆಕಾಂಕ್ಷಾ ಎಸ್. ಭಟ್ 281ನೇ ರ್ಯಾಂಕ್, ವಿಕಾಸ್ ವಿ. ಹಿರೆಮಠ್ 283ನೇ ರ್ಯಾಂಕ್, ಕಾರ್ತಿಕ್ ಬಿ.ಆರ್. 286ನೇ ರ್ಯಾಂಕ್, ಸಂಜಯ್ ಎಸ್. ಗೌಡ 287ನೇ ರ್ಯಾಂಕ್, ನೈಸರ್ಗಿ ಭವೇಶ್ ಕುಮಾರ್ ಭಯಾನಿ 289ನೇ ರ್ಯಾಂಕ್, ಪಿ. ಶ್ರೇಯಾ 318ನೇ ರ್ಯಾಂಕ್, ಮಿಝ್ನಾ ನಫೀಝಾ 322ನೇ ರ್ಯಾಂಕ್, ಸಹನಾ ಮಾನ್ವಿ 326ನೇ ರ್ಯಾಂಕ್, ಹೆಜಮಾಡಿ ಧೃವ್ ಇಂದ್ರೇಶ್ 331ನೇ ರ್ಯಾಂಕ್, ಆಶಿಶ್ ರವಿ ಕಲ್ಲೂರ್ 334ನೇ ರ್ಯಾಂಕ್, ಕಲ್ಮೇಶ್ ಸೂರ್ಗಾನಿ 338ನೇ ರ್ಯಾಂಕ್, ನಿಶಿತಾ ಎಚ್. ಎನ್. 354ನೇ ರ್ಯಾಂಕ್, ಆಶ್ಮಿತಾ ಗಿರೀಶ್ ಕುಲಕರ್ಣಿ 360ನೇ ರ್ಯಾಂಕ್, ತೇಜಸ್ ಎಸ್. ಡಿ. 370ನೇ ರ್ಯಾಂಕ್, ರಘುನಂದನ್ ಸಿ.ಎನ್. 377ನೇ ರ್ಯಾಂಕ್, ಪ್ರಣವ್ ಎನ್. ರಾವ್ 400ನೇ ರ್ಯಾಂಕ್, ಕೆ. ಫೃಥ್ವಿ ರಾವ್ 403ನೇ ರ್ಯಾಂಕ್, ಪೂಜಾ ಬಿ. 406ನೇ ರ್ಯಾಂಕ್, ಶಿವಗಂಗಾ ವಿ.ಪಿ. ಪಾಟೀಲ್ 412ನೇ ರ್ಯಾಂಕ್, ತೃಪ್ತಿ ವಿನೋದ್ ರೆಡ್ಡಿ 418ನೇ ರ್ಯಾಂಕ್, ಯು.ಎನ್.ನಿಕಿತಾ 426ನೇ ರ್ಯಾಂಕ್, ವಿಘ್ನಸಾಯಿ ವಿ. ನಾಯರ್ 434ನೇ ರ್ಯಾಂಕ್, ಕೊಂಚಡಿ ದೀಪ್ತಿ ಸುರೇಶ್ ಶೆಣೈ 448ನೇ ರ್ಯಾಂಕ್, ಶ್ರೀಕಾತ್ ರೆಡ್ಡಿ 462ನೇ ರ್ಯಾಂಕ್, ಶ್ರೇಯಾ ಬಫ್ನಾ 469ನೇ ರ್ಯಾಂಕ್, ತನಿಶಾ ಶೆಟ್ಟಿ 489ನೇ ರ್ಯಾಂಕ್, ಅಮಯ್ ರಾಜಶೇಖರ್ ಹೊಸಮಠ್ 496ನೇ ರ್ಯಾಂಕ್ ಪಡೆದಿದ್ದಾರೆ.

2017ನೇ ಸಾಲಿನ ಸಿಇಟಿಯ ಎಂಜಿನಿಯರಿಂಗ್ ಹಾಗೂ ಬಿ-ಫಾರ್ಮಾದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರತೀಕ್ ಎಸ್. ನಾಯಕ್ ಪ್ರಥಮ ರ್ಯಾಂಕ್ ಹಾಗೂ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಸೃಜನಾ ಎನ್. ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿರುವುದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News