ಟ್ರಾಫಿಕ್ ಪೊಲೀಸ್ ಬಾಬು ಶೆಟ್ಟಿಗೆ ಸಚಿವ ಖಾದರ್‌ರಿಂದ ಸನ್ಮಾನ
Update: 2017-07-04 17:39 IST
ಮಂಗಳೂರು, ಜು.4: ವಾಹನ ನಿಬಿಡತೆಯಿಂದ ಹಾಗೂ ಅಪಾಯಕಾರಿ ವೃತ್ತವಾಗಿ ಗುರುತಿಸಿಕೊಂಡಿರುವ ನಂತೂರು ಸರ್ಕಲ್‌ನಲ್ಲಿ ಪ್ರಾಮಾಣಿಕ ಸೇವೆಯ ಮೂಲಕ ಗುರುತಿಸಿಕೊಂಡಿರುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಾಬು ಶೆಟ್ಟಿ ಅವರನ್ನು ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಸನ್ಮಾನಿಸಿದರು.
ಇಂದು ಮಧ್ಯಾಹ್ನ 12.30ರ ಸುಮಾರಿಗೆ ನಂತೂರು ಸರ್ಕಲ್ ಬಳಿ ಎಂದಿನಂತೆ ಕರ್ತವ್ಯ ನಿರತರಾಗಿದ್ದ ಬಾಬು ಶೆಟ್ಟಿ ಅವರನ್ನು ಸಚಿವ ಖಾದರ್ ಹಾಗೂ ತಂಡ ಸನ್ಮಾನಿಸಲು ಮುಂದಾದಾಗ, ವಿಷಯ ತಿಳಿಯದೆ ಬಾಬು ಶೆಟ್ಟಿಯವರು ಕೂಡಾ ಕಸಿವಿಸಿಗೊಂಡ ಘಟನೆ ನಡೆಯಿತು.
ರಾತ್ರಿ ಸುಮಾರು 10 ಗಂಟೆಯವರೆಗೂ ಸರ್ಕಲ್ ಬಳಿ ಕಾಣಿಸಿಕೊಳ್ಳುವ ಬಾಬು ಶೆಟ್ಟಿಯವರು ತಮ್ಮ ಕರ್ತವ್ಯ ನಿಷ್ಠೆಯ ಮೂಲಕ ಸಾರ್ವಜನಿಕರ ಪ್ರಶಂಸೆಯನ್ನೂ ಗಳಿಸಿದ್ದಾರೆ.