ಆಟೋ ಚಾಲಕ ರಿಗೆ ರಕ್ಷಣೆಗೆ ಒತ್ತಾಯ: ಕೊಲೆಗೀಡಾದ ಆಟೋ ಚಾಲಕ ಅಶ್ರಫ್ ಕುಟುಂಬಕ್ಕೆ ನೆರವು ನೀಡಲು ಒತ್ತಾಯ
Update: 2017-07-04 17:44 IST
ಮಂಗಳೂರು, ಜು.4: ಆಟೋ ಚಾಲಕ ಅಶ್ರಫ್ ಕಲಾಯಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮೋಕ್ರೆಟಿಕ್ ಆಟೋ ಯೂನಿಯನ್ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.
ಅಶ್ರಫ್ ಹತ್ಯೆಯ ಹಿಂದಿರುವ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು, ಅಶ್ರಫ್ ಕುಟುಂಬಕ್ಕೆ ಸೂಕ್ತ ಪರಿಹಾರ ಸರಕಾರ ಘೋಷಿಸಬೇಕು ಮತ್ತು ಜಿಲ್ಲೆಯ ಆಟೋ ಚಾಲಕರಿಗೆ ಭದ್ರತೆ ಒದಗಿಸಬೇಕು ಎಂದು ಆಟೋ ಯೂನಿಯನ್ ಆಗ್ರಹಿಸಿದೆ.
ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಮುಖಂಡರಾದ ಅಕ್ರಮ್ ಹಸನ್, ಯೂನಿಯನ್‌ನ ಅಧ್ಯಕ್ಷ ಮುಹಮ್ಮದ್ ಕಮಲ್, ಇಕ್ಬಾಲ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.