ಆಳ್ವಾಸ್‌ನ ಎನ್.ಸಿ.ಸಿಗೆ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Update: 2017-07-04 12:36 GMT

ಮೂಡಬಿದಿರೆ,ಜು.4: ಭಾರತ ಸರ್ಕಾರದ ಆಯುಷ್ ಇಲಾಖೆಯ ವತಿಯಿಂದ ಭೂದಳ, ವಾಯುದಳದ ಹಿರಿಯ ಕಿರಿಯ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್‌ನ ಎನ್‌ಸಿಸಿ ಕೆಡೆಟ್ ಗಳು ಪ್ರಥಮ ಸ್ಥಾನಗಳಿಸಿದ್ದಾರೆ.

 ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್ ವ್ಯಾಪ್ತಿಯಲ್ಲಿ ಈ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಕಾಲೇಜಿನ 100ಕ್ಕೂ ಅಧಿಕ ಎನ್.ಸಿ.ಸಿ ವಿದ್ಯಾರ್ಥಿಗಳು ಶ್ವೇತಾವರ್ಣದಾರಿಗಳಾಗಿ, ಸಾವಿರ ಕಂಬದ ಆವರಣದ ಹಾಸುಹುಲ್ಲಿನ ಮೇಲೆ ವ್ಯಾಯಾಮಗಳನ್ನು ಮಾಡಿದರು. ಈ ಸ್ಪರ್ಧೆಯ ಪೋಟೋಶೂಟ್ ನಡೆಸಿ ಇಲಾಖೆಗೆ ಕಳುಹಿಸಿಕೊಡಲಾಗಿತ್ತು.

ಇದರ ಆಧಾರದ ಮೇಲೆ ವಿಜೇತರನ್ನು ಆಯ್ಕೆಮಾಡಲಾಗಿತ್ತು. ಆಳ್ವಾಸ್ ನ್ಯಾಚುರೋಪತಿ ಯೋಗಿಕ್ ಸೈನ್ಸ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಎನ್ ಸಿ ಸಿ ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಭಂಗಿಗಳ ತರಬೇತಿಯನ್ನು ನೀಡಿದ್ದರು. ಕಾಲೇಜಿನ ಎನ್.ಸಿ.ಸಿ ಆಫೀಸರ್ ಡಾ.ರಾಜೇಶ್, ವಾಯುದಳದ ಕೇರ್ ಟೇಕರ್‌ಗಳಾದ ಪರ್ವೇಜ್, ಎನ್.ಸಿ.ಸಿ ಕಿರಿಯ ವಿಭಾಗದ ಕೇರ್ ಟೇಕರ್ ಪ್ರವೀಣ್ ಗೌಡ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News