ಉತ್ತರ ಕೊರಿಯದಿಂದ ಖಂಡಾಂತರ ಕ್ಷಿಪಣಿಯ ಯಶಸ್ವಿ ಹಾರಾಟ
Update: 2017-07-04 18:36 IST
ಪ್ಯಾಂಗ್‌ಯಾಂಗ್ (ಉತ್ತರ ಕೊರಿಯ), ಜು. 4: ತಾನು ಖಂಡಾಂತರ ಪ್ರಕ್ಷೇಪಕ ಕ್ಷಿಪಣಿ (ಐಸಿಬಿಎಂ)ಯೊಂದರ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಉತ್ತರ ಕೊರಿಯ ಮಂಗಳವಾರ ಹೇಳಿದೆ.
ಅಮೆರಿಕದ ರಾಜ್ಯ ಅಲಾಸ್ಕದ ಮೇಲೆ ದಾಳಿಮಾಡಲು ಸಾಧ್ಯವಿರುವಷ್ಟು ದೂರ ಕ್ಷಿಪಣಿ ಹಾರಿದೆ ಎಂದು ಪರಿಣತರೊಬ್ಬರು ಹೇಳಿದ್ದಾರೆ.
ಉತ್ತರ ಕೊರಿಯದ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಮೇಲೆ ಕಡಿವಾಣ ಹಾಕಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಜಿ20 ದೇಶಗಳ ನಾಯಕರು ಸಭೆ ಸೇರುವ ಕೆಲವೇ ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ.
ಕ್ಷಿಪಣಿಯು 39 ನಿಮಿಷಗಳಲ್ಲಿ 933 ಕಿ.ಮೀ. ದೂರ ಕ್ರಮಿಸಿತು ಹಾಗೂ 2,802 ಕಿ.ಮೀ. ಗರಿಷ್ಠ ಎತ್ತರವನ್ನು ತಲುಪಿತು ಎಂದು ಉತ್ತರ ಕೊರಿಯದ ಸರಕಾರಿ ಮಾಧ್ಯಮ ತಿಳಿಸಿದೆ.