ಪಣಂಬೂರು ಠಾಣಾ ಇನ್ಸ್ ಪೆಕ್ಟರ್ ರಫೀಕ್ ರಿಗೆ ಅಭಿನಂದನೆ

Update: 2017-07-04 13:46 GMT

ಮಂಗಳೂರು, ಜು. 4: ಪಣಂಬೂರು ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಆಗಿ ನಿಯುಕ್ತರಾದ ಮಂಗಳೂರು ಎಂ. ಫ್ರೆಂಡ್ಸ್ ಸದಸ್ಯ ರಫೀಕ್ ಕೆ.ಎಂ. ಅವರನ್ನು ಎಂ.ಫ್ರೆಂಡ್ಸ್ ವತಿಯಿಂದ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಪಣಂಬೂರು ಠಾಣೆಯಲ್ಲಿ ಮಂಗಳವಾರ ಅಭಿನಂದಿಸಿದರು.

ಎಂ. ಫ್ರೆಂಡ್ಸ್ ಕಾರ್ಯದರ್ಶಿ ರಶೀದ್ ವಿಟ್ಲ, ಕಾನೂನು ಸಲಹೆಗಾರರಾದ ಅಬೂಬಕರ್ ನೋಟರಿ ವಿಟ್ಲ ಹಾಗೂ ರಫೀಕ್ ಹಾಜಿ ಕಲ್ಲಡ್ಕ ಈ ಸಂದರ್ಭ ಉಪಸ್ಥಿತರಿದ್ದರು.

ರಫೀಕ್ ಕೆ.ಎಂ. ಮಂಗಳೂರು ಕಮಿಷನರ್ ಕಚೇರಿಯಿಂದ ಪಣಂಬೂರು ಠಾಣೆಗೆ ಜೂ.19ರಂದು ವರ್ಗಾವಣೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News