×
Ad

ಮಹಿಳಾ ಸಿಬ್ಬಂದಿಗೆ ನಿಂದನೆ : ದೂರು ದಾಖಲು

Update: 2017-07-04 21:29 IST

ಮೂಡುಬಿದಿರೆ,ಜು.4: ನಾಡಕಚೇರಿ ಬಳಿಯ ಅಟಲ್‍ಜೀ ಜನಸ್ನೇಹಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬಂದಿಗಳಿಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಾರೂರಿನ ಯಶೋಧರ ದೇವಾಡಿಗ ಎಂಬವನ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಟಲ್‍ಜೀ ಜನಸ್ನೇಹಿ ಕೇಂದ್ರದಲ್ಲಿ ಮಹಿಳಾ ಸಿಬಂದಿಗಳಿಬ್ಬರು ಆಧಾರ್‍ಗೆ ಫೊಟೊ ತೆಗೆಯುವ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಬಂದ ಆರೋಪಿ ಅವಾಚ್ಯ ಶಬ್ದಗಳಿಂದ ಬೈದಿದ್ದ ಎನ್ನಲಾಗಿದೆ.

ಸಿಬ್ಬಂದಿಗಳು ಈ ವಿಷಯವನ್ನು ತಹಶಿಲ್ದಾರ್ ಗಮನಕ್ಕೆ ತಂದು ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News