ಜು.8: ಬಂಟ್ವಾಳ ರೋಟರಿ ಕ್ಲಬ್ ಪದಗ್ರಹಣ

Update: 2017-07-04 15:59 GMT

ಬಂಟ್ವಾಳ, ಜು. 4: ಬಂಟ್ವಾಳ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಬಿ.ಎ. ಸೋಮಯಾಜಿ ಸ್ಮಾರಕ ಹಾಲ್ ನಲ್ಲಿ ಜುಲೈ 8ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ರೋಟರಿ ಜಿಲ್ಲೆ ಗವರ್ನರ್ ಆಗಿ ಆಯ್ಕೆಗೊಂಡಿರುವ ರೋಹಿನಾಥ್ ಪಿ. ಪದಗ್ರಹಣ ಕಾರ್ಯಕ್ರಮ ನೆರವೇರಿಸುವರು. ಈ ಸಂದರ್ಭ ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ ಎ.ಎಂ.ಕುಮಾರ್, ಕರುಣಾಕರ ರೈ ಉಪಸ್ಥಿತರಿರುವರು ಎಂದು ಪದಗ್ರಹಣ ಸ್ವೀಕರಿಸಲಿರುವ ಅಧ್ಯಕ್ಷ ಸಂಜೀವ ಪೂಜಾರಿ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಶಿಷ್ಟ್ಯವನ್ನು ನಿರ್ಮಿಸೋಣ ಎಂಬ ಧ್ಯೇಯವಾಕ್ಯದೊಂದಿಗೆ ಈ ಬಾರಿ ಕಾರ್ಯಚಟುವಟಿಕೆ ನಡೆಯಲಿದೆ. ಅಧ್ಯಕ್ಷರಾಗಿ ಸಂಜೀವ ಪೂಜಾರಿ ಗುರುಕೃಪಾ, ನಿಕಟಪೂರ್ವ ಅಧ್ಯಕ್ಷರಾಗಿ ರಿತೇಶ್ ಬಾಳಿಗಾ, ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ, ಖಜಾಂಚಿಯಾಗಿ ಪ್ರಕಾಶ್ ಬಾಳಿಗಾ, ಉಪಾಧ್ಯಕ್ಷರಾಗಿ ಬಸ್ತಿ ಮಾಧವ ಶೆಣೈ, ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಸುವರ್ಣ, ನಿಯೋಜಿತ ಅಧ್ಯಕ್ಷರಾಗಿ ಮಂಜುನಾಥ ಆಚಾರ್ಯ, ಕಮ್ಯುನಿಟಿ ಸರ್ವಿಸ್ ನಿರ್ದೇಶಕರಾಗಿ ಸದಾಶಿವ ಬಾಳಿಗ, ವೊಕೇಶನಲ್ ಸರ್ವೀಸ್ ನಿದೇರ್ಶಕರಾಗಿ ಭಾನುಶಂಕರ ಬನ್ನಿಂತಾಯ, ಸಾರ್ಜಂಟ್ ಚಂದ್ರಹಾಸ ಗಾಂಭೀರ ಪದಗ್ರಹಣ ಸ್ವೀಕರಿಸುವರು.

ರೋಟರಿ ಎಲ್ಲ ಐದು ಸೇವಾ ವಿಭಾಗಗಳಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿದ್ಯಾಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಲಿದೆ ಎಂದು ಈ ಸಂದರ್ಭ ರೋಟರಿಯ ಪ್ರಮುಖ ಪ್ರಕಾಶ ಕಾರಂತ ಮಾಹಿತಿ ನೀಡಿದರು.

ಜಿಲ್ಲೆಯ ವಿಶೇಷ ಯೋಜನೆಯಾದ ಪರಿಸರ ಸಂರಕ್ಷಣೆಯಡಿ ಸಮಾಜದಲ್ಲಿ ಅರಿವು ಮೂಡಿಸಿ, ಗಿಡ ನೆಡುವುದು, ಗಿಡ ವಿತರಣೆ, ರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಂಪೂರ್ಣ ಸಾಕ್ಷರತೆ ನಿಟ್ಟಿನಲ್ಲಿ ಟೀಚ್ ಯೋಜನೆ ರೂಪಿಸಲಾಗಿದೆ ಎಂದು ಸಂಜೀವ ಪೂಜಾರಿ ಗುರುಕೃಪಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ. ನಾರಾಯಣ ಹೆಗ್ಡೆ, ಕೋಶಾಧಿಕಾರಿ ಪ್ರಕಾಶ್ ಬಾಳಿಗಾ, ನಿಕಟಪೂರ್ವ ಅಧ್ಯಕ್ಷ ರಿತೇಶ್ ಬಾಳಿಗಾ, ಉಪಾಧ್ಯಕ್ಷ ಬಸ್ತಿ ಮಾಧವ ಶೆಣೈ, ನಿಯೋಜಿತ ಅಧ್ಯಕ್ಷ ಮಂಜುನಾಥ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News