×
Ad

ಎಸಾಲ್ಟ್ ರೈಫಲ್ ದೋಷಪೂರಿತ ಎಂದ ಸೇನೆ

Update: 2017-07-04 21:55 IST

ಹೊಸದಿಲ್ಲಿ, ಜು. 4: ಕಳೆದ ತಿಂಗಳು ಸೇನೆ ತಿರಸ್ಕರಿಸಿರುವ ಗೃಹ ನಿರ್ಮಿತ ಎ ರೈಫಲ್ ಯಾವುದೇ ರೀತಿಯ ನಿಲ್ಲದೆ ದೋಷರಹಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸರಕಾರ ನಡೆಸುತ್ತಿರುವ ಶಸ್ತ್ರಾಸ್ತ್ರ ಕೈಗಾರಿಕೆ ಮಂಡಳಿ ಹೇಳಿದೆ.

ಈ ನಡುವೆ ಜಗತ್ತಿನ 21 ರೈಫಲ್ ಉತ್ಪಾದನಾ ಕಂಪೆನಿಗಳು ಈ ರೈಫಲ್‌ಗಳ ಉತ್ಪಾದನೆಗೆ ಗುತ್ತಿಗೆ ಪಡೆಯಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿ ಇದೆ.

  ಕೆಲವು ತಿಂಗಳ ಹಿಂದೆ ನೂತನ 7.62 ಎಂಎಂ (ಎಕ್ಸ್) ಎ ರೈಫಲ್ ಅನ್ನು ಪರಿಶೀಲಿಸಿದ ಬಳಿಕ ಸೇನೆ ಇದು ಹೆಚ್ಚು ಶಬ್ದ ಉಂಟು ಮಾಡುತ್ತಿದೆ ಹಾಗೂ ಹೋರಾಡಲು ಸೂಕ್ತವಲ್ಲ ಎಂದು ಹೇಳಿತ್ತು. ಈ ಬಗ್ಗೆ ಸೇನೆ ರಕ್ಷಣಾ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು.

ಪರಿಶೀಲನೆಯ ವೇಳೆ ಉನ್ನತ ಮಟ್ಟದ ಸೇನಾಧಿಕಾರಿಗಳು ಈ ರೈಫಲ್‌ನಿಂದ ಗುಂಡು ಹಾರಿಸಿದ್ದಾರೆ. ಅದು ಸಲೀಸಾಗಿತ್ತು. ಯಾವುದೇ ತೊಂದರೆ ಇರಲಿಲ್ಲ ಎಂದು ರೈಫಲ್ ಉತ್ಪಾಕರು ತಿಳಿಸಿದ್ದರು.

ಆದರೆ, ಶಸ್ತ್ರಾಸ್ತ್ರ ಕೈಗಾರಿಕೆ ಮಂಡಳಿ ಸ್ಪಷ್ಟನೆಯನ್ನು ಕೇಳುವ ಸ್ಥಿತಿಯಲ್ಲಿ ಸೇನೆ ಇಲ್ಲ. ಸೇನೆಯ ಮುಂಚೂಣಿಯ ಯೋಧರು ಬಳಸುವ ಮೂಲಭೂತ ಆಯುಧ ಎ ರೈಫಲ್ ಅನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಸೇನೆ ಇಲ್ಲ.

ಭಾರತೀಯ ಸೇನೆಗೆ 1,85,000 ಎ ರೈಫಲ್‌ಗಳ ಅಗತ್ಯತೆ ಇದೆ. ಪ್ರತಿಯೊಂದು ರೈಫಲ್‌ಗೆ ಅದರ ಸಲಕರಣೆ ಸೇರಿ ಒಟ್ಟು 1 ಲಕ್ಷವಾಗುತ್ತದೆ. ಆದುದರಿಂದ ಈ ಬೃಹತಂ ಗುತ್ತಿಗೆ ಸುಮಾರು 1850 ಕೋಟಿ ರೂಪಾಯಿಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News