ಡಿಸೇಲ್ ಮಾರಾಟದಲ್ಲಿ ವಂಚನೆ
Update: 2017-07-04 22:07 IST
ಗಂಗೊಳ್ಳಿ, ಜು.4: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸಹಕಾರಿ ಮೀನು ಮಾರಾಟ ಮಹಾಮಂಡಳಿ ನಿಯಮಿತ ಮಂಗಳೂರು ಇದರ ಗಂಗೊಳ್ಳಿ ಡೀಸೆಲ್ ಬಂಕ್‌ನಲ್ಲಿ ಡಿಸೇಲ್ ವಿತರಣೆಯಲ್ಲಿ ಲಕ್ಷಾಂತರ ರೂ.ಗಳ ಅವ್ಯವಹಾರ ನಡೆದಿರುವ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜನಾದೇವಿ ಟಿ. ಗಂಗೊಳ್ಳಿ ಬಂದರ್‌ನಲ್ಲಿರುವ ಈ ಡಿಸೇಲ್ ಬಂಕ್‌ನ 2014ರ ಆಗಸ್ಟ್‌ನಿಂದ 2015ರ ಮೇವರೆಗೆ ದಾಖಲೆಗಳ ಪರಿಶೀಲನೆ ನಡೆಸಿದಾಗ ಕರ್ತವ್ಯನಿರತ ಮಂಡಳಿಯ ಗಂಗೊಳ್ಳಿ ಡೀಸೆಲ್ ಬಂಕ್‌ನ ಮೇಲ್ವಿಚಾರಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಡೀಸೆಲ್ ಬಂಕ್‌ನಿಂದ ಅಗತ್ಯ ವಸ್ತುಗಳ ಕಾಯಿದೆಯ ಅನುಗುಣವಾಗಿ ಮೀನುಗಾರರಿಗೆ ವಿತರಿಸಬೇಕಾದ ಡೀಸೆಲ್ ಅನ್ನು ತಮ್ಮ ದುರ್ಲಾಭಕ್ಕಾಗಿ ವಿತರಣೆ ಮಾಡಿ 1,04,951ರೂ. ದುರುಪಯೋಗ ಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.