×
Ad

ಲಕ್ನೋ: ದಲಿತ ಚಳವಳಿಗಾರರ ಬಂಧನ

Update: 2017-07-04 22:52 IST

ಹೊಸದಿಲ್ಲಿ, ಜು. 4: ಹೊಸದಿಲ್ಲಿ ಝಾನ್ಸಿ ರೈಲ್ವೇ ನಿಲ್ದಾಣದಲ್ಲಿ ದಲಿತರು ಹಾಗೂ ಆದಿವಾಸಿ ಚಳವಳಿಗಾರರನ್ನು ವಶಕ್ಕೆ ತೆಗೆದುಕೊಂಡ ದಿನದ ಬಳಿಕ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಲಕ್ನೋದ ಪ್ರೆಸ್‌ಕ್ಲಬ್‌ನಲ್ಲಿ ಸಮಾವೇಶ ನಡೆಸಿದ ಆರೋಪದಲ್ಲಿ 8 ಮಂದಿ ಹಿರಿಯ ಚಳವಳಿಗಾರರನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅದಾಗ್ಯೂ, ಸಮಾವೇಶ ಯಶಶ್ವಿಯಾಗಿ ರದ್ದುಗೊಂಡ ಬಳಿಕ ಉತ್ತರ ಪ್ರದೇಶ ಪೊಲೀಸರು ಚಳವಳಿಗಾರರನ್ನು 25 ಸಾವಿರ ಬಾಂಡ್ ಖಾತರಿ ಮೇಲೆ ಬಿಡುಗಡೆಗೊಳಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ, ಪೊಲೀಸ್ ಸುಧಾರಣೆ ಪ್ರತಿಪಾದಕ ಎಸ್.ಆರ್. ದಾರಾಪುರಿ, ಶಿಕ್ಷಣತಜ್ಞ ರಮೇಶ್ ದೀಕ್ಷಿತ್, ಪತ್ರಕರ್ತ ರಾಮ್ ಕುಮಾರ್ ಹಾಗೂ ಆಶಿಸ್ ಅಶ್ವಥಿ ಹಾಗೂ ಇತರ ನಾಲ್ವರನ್ನು ಲಕ್ನೋ ಪ್ರೆಸ್‌ಕ್ಲಬ್‌ನಲ್ಲಿ ಸಮಾವೇಶ ನಡೆಸುತ್ತಿದ್ದ ಸಂದರ್ಭ ಬಂಧಿಸಲಾಯಿತು. ಬಿಎಪಿ ನೇತೃತ್ವದ ಉತ್ತರಪ್ರದೇಶ ಸರಕಾರದಲ್ಲಿ ದಲಿತರ ಮೇಲಿನ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ವಿಚಾರಗೊಷ್ಠಿ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News