×
Ad

ಹಜ್ ಯಾತ್ರಾರ್ಥಿಗಳಿಗೆ ಲಸಿಕೆ -ತರಬೇತಿ ಕಾರ್ಯಕ್ರಮ

Update: 2017-07-05 15:58 IST

ಉಡುಪಿ, ಜು.4: ಹಜ್ ಸಮಿತಿಯ ಮೂಲಕ ಹಜ್ ಯಾತ್ರೆ ಕೈಗೊಳ್ಳುವವರಿಗೆ ಚುಚ್ಚುಮದ್ದು, ಲಸಿಕೆ ನೀಡುವ ಹಾಗೂ ತರಬೇತಿ ಕಾರ್ಯಕ್ರಮವನ್ನು ಉಡುಪಿಯ ಖದೀಮುಲ್ ಹಜ್ಜಾಜ್ ವತಿಯಿಂದ ಬುಧವಾರ ಮಣಿಪಾಲ ಮಸೀದಿಯಲ್ಲಿ ಆಯೋಜಿಸಲಾಗಿತ್ತು.

ಖದೀಮುಲ್ ಹಜ್ಜಾಜ್‌ನ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷ ಯಹ್ಯಾ ನಕ್ವಾ ಮಾತನಾಡಿ, ಈ ಬಾರಿ ಉಡುಪಿ ಜಿಲ್ಲೆಯಿಂದ 64 ಮಂದಿ ಹಜ್ಜಾಜ್‌ಗಳು ಹಜ್ ಯಾತ್ರೆ ಕೈಗೊಳ್ಳಲಿರುವರು. ಬಜ್ಪೆಯ ಹಳೆ ವಿಮಾನ ನಿಲ್ದಾಣದಲ್ಲಿ ಜು.22ರಂದು ನೋಂದಾವಣಿ, 23 ರಂದು ಲಗೇಜ್ ಮತ್ತು 24,25,26ರಂದು ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನ ಹಜ್‌ಯಾತ್ರೆಗೆ ಹೊರಡಲಿದೆ. ಉಳಿದುಕೊಳ್ಳಲು ಮತ್ತು ಊಟದ ವ್ಯವಸ್ಥೆಯನ್ನು ಬಜ್ಪೆ ಅನ್ಸಾರಿಯಾ ಸ್ಕೂಲ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೂಡೆಯ ದಾರುಸ್ಸಲಾಂ ಏಜುಕೇಶನ್ ಸೊಸೈಟಿಯ ಪ್ರಾಂಶುಪಾಲ ಉಸ್ಮಾನ್ ಮಿಸ್ಬಾಯಿ, ಮಣಿಪಾಲ ಮಸೀದಿಯ ಇಮಾಮ್ ಸಾದಿಕ್ ಶಾಫಿ, ಅಲ್ ಇಬಾದ ಹೈಸ್ಕೂಲ್‌ನ ಪ್ರಾಂಶುಪಾಲ ಅಬ್ದುಲ್ ಲತೀಫ್ ಮದನಿ, ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ.ಪಿ.ಮೊದಿನಬ್ಬ, ಖದೀಮುಲ್ ಹಜ್ಜಾಜ್ ಸದಸ್ಯರಾದ ಖಲೀಲ್ ಅಹ್ಮದ್, ಮುಹಮ್ಮದ್ ಮರಕಡ ಉಪಸ್ಥಿತರಿದ್ದರು.

ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ರಾವ್ ಹಾಗೂ ಮಣಿಪಾಲ ಪಟ್ಟಣ ಆರೋಗ್ಯ ಕೇಂದ್ರ ಡಾ.ಈಶ್ವರಿ ಲಸಿಕೆಯ ಕುರಿತು ಮಾಹಿತಿ ನೀಡಿದರು. ರಹಮತುಲ್ಲಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News