×
Ad

ಸುರಲ್ಪಾಡಿ ಮದ್ರಸ ಪ್ರಾರಂಭೋತ್ಸವ

Update: 2017-07-05 18:05 IST

ಮಂಗಳೂರು, ಜು.5: ಮಳ್‌ಹರುಲ್ ಅವಾಖಿಫ್ ಜುಮಾ ಮಸ್ಜಿದ್ ಸುರಲ್ಪಾಡಿ ಜಮಾಅತ್‌ನ ನೂರುಲ್ ಉಲಮಾ ಮದ್ರಸ ತರಗತಿಗಳ ಪ್ರಾರಂಭೋತ್ಸವವು ಸಮಸ್ತದ ನಿಯಮದಂತೆ ಬುಧವಾರ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಸುರಲ್ಪಾಡಿ ಜಮಾಅತ್‌ನ ಅಧ್ಯಕ್ಷ ಸುರಲ್ಪಾಡಿ ಅಬ್ದುಲ್ ಮಜೀದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಬಾರಿಯ 5,7,10ನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಹಾಗು ಶಿಕ್ಷಣ ನೀಡಿದ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಅಲ್ಲದೆ ದ.ಕ.ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಅರಬಿಕ್ ಕಾಲೇಜಿನಲ್ಲಿ ಬಿಕಾಂ ಹಾಗು ಇಸ್ಲಾಮಿನ ‘ವಫಿಯ’ ಪದವಿ ಪಡೆದ ಮದ್ರಸದ ಹಳೆ ವಿದ್ಯಾರ್ಥಿನಿ ಆಯಿಶಾ ಝಕಿಯಾರನ್ನು ಅಭಿನಂದಿಸಲಾಯಿತು.

ಮಸೀದಿಯ ಖತೀಬ್ ಶಾಫಿ ಇರ್ಫಾನಿ ದುಆ ಮಾಡಿದರು. ಸದರ್ ಉಸ್ತಾದ್ ಆಸಿಫ್ ಯಮಾನಿ ಪ್ರಾಸ್ತಾವಿಕ ಭಾಷಣ ಮಾಡಿದರು. ಗುರುಪುರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ನೌಶಾದ್ ಹಾಜಿ, ಜಮಾಅತ್ ಕಮಿಟಿಯ ಕೋಶಾಧಿಕಾರಿ ಆರ್.ಎಸ್. ಮುಹಮ್ಮದ್ ಇರ್ಶಾದುಲ್, ಮುಸ್ಲಿಮೀನ್ ಯೂತ್ ಅಸೋಸಿಯೇಶನ್‌ನ ಅಧ್ಯಕ್ಷ ಟಿ.ಎಸ್.ಇಸ್ಮಾಯೀಲ್ ಬಾವಾ, ಅಧ್ಯಾಪಕರಾದ ಉಸ್ಮಾನ್ ಮುಕ್ರಿ, ಉಸ್ಮಾನ್, ಸದಸ್ಯ ಎಂ.ಮುಹಮ್ಮದ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಶೇಖ್ ಮುಕ್ತಾರ್ ಸ್ವಾಗತಿಸಿದರು. ಬಿಜಿಲಿ ಅಬ್ದುಲ್ ಖಾದರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News