×
Ad

ಸುನ್ನಿ ಸಂದೇಶ ಸಮಸ್ತ ಪುಸ್ತಕ ಮೇಳಕ್ಕೆ ಚಾಲನೆ

Update: 2017-07-05 18:08 IST

ಮಂಗಳೂರು, ಜು.5: ಶಂಸುಲ್ ಉಲಮಾ ಪಬ್ಲಿಕೇಷನ್ ಮಂಗಳೂರು ಇದರ ಅಧೀನದಲ್ಲಿರುವ ಎಂ.ಆರ್. ಬುಕ್‌ಸ್ಟಾಲ್ ವತಿಯಿಂದ ಕಳೆದ 10 ವರ್ಷಗಳಿಂದ ಮದ್ರಸ ಪ್ರಾರಂಭದಲ್ಲಿ ನಡೆಸುತ್ತಾ ಬರುತ್ತಿರುವ ಸಮಸ್ತ ಪುಸ್ತಕ ಮೇಳಕ್ಕೆ ಸಮಸ್ತ ಶಿಕ್ಷಣ ಮಂಡಳಿಯ ಕೇಂದ್ರೀಯ ಕಾರ್ಯದರ್ಶಿ, ಚಿಕ್ಕಮಗಳೂರು ಖಾಝಿ ಶೈಖುನಾ ಹಾಜಿ ಎಂ.ಎ. ಖಾಸಿಂ ಉಸ್ತಾದ್ ಚಾಲನೆ ನೀಡಿದರು.

ಸಮಸ್ತದ 4, 5 ತರಗತಿಗಳಿಗೆ ಹೊಸತಾಗಿ ಹೊರತಂದ ಪಠ್ಯ ಪುಸ್ತಕವನ್ನು ದ.ಕ. ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಐ. ಮೊಯ್ದಿನಬ್ಬ ಹಾಜಿಗೆ ಮತ್ತು ಎಂ. ಆರ್. ಪಬ್ಲಕೇಷನ್ ಹೊರತಂದ ಮದ್ರಸ ಬ್ಯಾಗ್ ಹಾಗೂ ಅರಬಿಕ್ ಮಾರ್ಜಿನ್ ಇರುವ ನೋಟ್ ಪುಸ್ತಕವನ್ನು ರಿಯಾಝ್ ಹಾಜಿ ಹಾಗೂ ಸಿತಾರ್ ಮಜೀದ್ ಹಾಜಿಯವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸುನ್ನಿ ಸಂದೇಶ ಪ್ರಧಾನ ಸಂಪಾದಕ ಹಾಜಿ ಕೆ.ಎಸ್. ಹೈದರ್ ದಾರಿಮಿ, ಕಿಸಾ ಉಪಾಧ್ಯಕ್ಷ ಎ.ಎಚ್. ನೌಷಾದ್ ಹಾಜಿ, ಎಸ್‌ಐಎಸ್ ಜಿಲ್ಲಾ ಕಾರ್ಯದರ್ಶಿ ಕುಕ್ಕಿಲ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ಕೇಂದ್ರೀಯ ಉಪಾಧ್ಯಕ್ಷ ಅಬ್ಬಾಸ್ ದಾರಿಮಿ ಕಳಿಂಜ, ಎಸ್‌ಬಿ ಜಿಲ್ಲಾ ಅಧ್ಯಕ್ಷ ಸಿದ್ಧೀಕ್ ಫೈಝಿ ಕರಾಯ, ಮುಬಾರಕ್ ಹುಸೈನ್ ಮುಸ್ಲಿಯಾರ್, ಶಫೀಕ್ ಕಡಬ, ಹಸನ್ ಬೆಂಗರೆ, ರಫೀಕ್ ಕೊಡಾಜೆ, ರಿಯಾಝ್ ಹಾಜಿ ಬಂದರ್, ಅಲಿ ಫೈಝಿ ಕುದ್ರೋಳಿ, ಕುಟುಂಬ ಪತ್ರಿಕೆಯ ಸಂಪಾದಕ ಬಶೀರ್ ಅಝ್‌ಹರಿ ಬಾಯಾರ್, ಅಬ್ದುಲ್ಲಾ ಬಿ.ಸಿ. ರೋಡ್, ಶಾಹುಲ್ ಹಮೀದ್ ಐವರ್ನಾಡು, ಟಿ.ಎಂ. ಹನೀಫ್ ಮೌಲವಿ ತುಂಬೆ, ಜಲೀಲ್ ಅಲ್‌ರಮಿ ಬೆಂಗರೆ, ಫಾರೂಕ್ ಕಸೈಗಳ್ಳಿ, ಬಿ.ಎ. ಬಶೀರ್ ಮುಲ್ಕಿ, ಖಲಂದರ್ ಕೆಳಿಂಜ, ತಸ್ಲೀಮ್ ಅರ್ಶದಿ ಮಾರಿಪಳ್ಳ, ಜಬ್ಬಾರ್ ಮಂಗಳೂರು, ಫಕ್ರುದ್ದೀನ್ ಹಾಜಿ ಮಂಗಳೂರು, ಕೆ.ಎಲ್. ಉಮರ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಖಾಸಿಂ ಉಸ್ತಾದರನ್ನು ಮಜೀದ್ ಹಾಜಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಿದರು. ಪುಸ್ತಕ ಮೇಳದ ಸ್ಥಾಪಕ ಮುಸ್ತಫ ಫೈಝಿ ಸ್ವಾಗತಿಸಿದರು. ಆಡಳಿತ ನಿದೇರ್ಶಕ ರಫೀಕ್ ಮೌಲವಿ ಅಜ್ಜಾವರ ವಂದಿಸಿದರು. ಇಬ್ರಾಹೀಂ ಶಾಹಿದ್ ಕಾರ್ಯಕ್ರಮ ನಿರೂಪಿಸಿದರು.
*ಪುಸ್ತಕ ಮೇಳದಲ್ಲಿ ಮದ್ರಸ 1ನೇ ತರಗತಿಯಿಂದ +2 ತರಗತಿವರೆಗೆ ಇರುವ ಎಲ್ಲ ಪಠ್ಯ ಪುಸ್ತಕಗಳು, ಅರಬಿಕ್ ಮಾರ್ಜಿನ್ ಇರುವ ನೋಟ್ ಪುಸ್ತಕಗಳು, ಭಾರತ ಹಾಗೂ ದೇಶ ರಾಜ್ಯಗಳ ಖುರ್‌ಆನ್ ಗ್ರಂಥಗಳು, ಮಲಯಾಳ, ಕನ್ನಡ, ಅರಬಿಕ್, ಇಂಗ್ಲಿಷ್ ಪುಸ್ತಕಗಳು ಹಾಗೂ ಇನ್ನಿತರ ಮದ್ರಸ ಉಪಯುಕ್ತ ಸಾಮಾಗ್ರಿಗಳು ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News