×
Ad

ನೂತನ ಮನೆ ಹಸ್ತಾಂತರ

Update: 2017-07-05 18:20 IST

ಮಂಗಳೂರು, ಜು.5: ಮನಪಾ ವ್ಯಾಪ್ತಿಯ 37ನೇ ವಾರ್ಡ್‌ನ ಸೂರ್ಯನಾರಾಯಣ ದೇವಸ್ಥಾನದ ಬಳಿ ರಸ್ತೆ ಅಗಲೀಕರಣ ಸಂದರ್ಭ ಸ್ಥಳಾಂತರಗೊಂಡ ಹಿನ್ನಲೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಮನೆಯನ್ನು ಶಾಸಕ ಜೆ.ಆರ್.ಲೋಬೊ ಹಸ್ತಾಂತರಿಸಿದರು.

ಶಾಸಕರ ಶಿಫಾರಸಿನ ಮೇರೆಗೆ ಕಲ್ಯಾಣಿಗೆ 17 ಲಕ್ಷ ರೂ. ವೆಚ್ಚದಲ್ಲಿ ನಗರಪಾಲಿಕೆ ಮನೆ ನಿರ್ಮಿಸಿ ಕೊಟ್ಟಿತ್ತು. ಈ ಸಂದರ್ಭ ಮೇಯರ್ ಕವಿತಾ ಸನಿಲ್, ನಗರಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸವಿತಾ ಮಿಸ್ಕಿತ್, ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್‌ಗಳಾದ ಕೇಶವ ಮರೋಳಿ, ಪ್ರವೀಣ್‌ಚಂದ್ರ ಆಳ್ವ, ಪ್ರಕಾಶ್ ಸಾಲ್ಯಾನ್, ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News