×
Ad

ಖರೀದಿ ಕೇಂದ್ರದಲ್ಲಿ ಅಡಿಕೆ, ನಗದು ಕಳವು

Update: 2017-07-05 19:12 IST

ಕಾಸರಗೋಡು, ಜು. 5: ಖರೀದಿ ಕೇಂದ್ರದ ಶಟರ್ ಮುರಿದು ಒಳನುಗ್ಗಿದ ಕಳ್ಳರು  265 ಕಿಲೋ ಅಡಿಕೆ ಮತ್ತು 42 ಸಾವಿರ ರೂ. ನಗದು  ಕಳವುಗೈದ ಘಟನೆ  ಬದಿಯಡ್ಕ ಠಾಣಾ ವ್ಯಾಪ್ತಿಯ ನೀರ್ಚಾಲು ನಲ್ಲಿ ನಡೆದಿದೆ. ಮಲ್ಲಡ್ಕದ  ರವಿಕುಮಾರ್  ರೈ ಎಂಬವರ ಮಾಲಕತ್ವದ  ಖರೀದಿ ಕೇಂದ್ರಕ್ಕೆ ನುಗ್ಗಿದ ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಶಟರನ್ನು ವಾಹನಕ್ಕೆ ಕಟ್ಟಿ ಎಳೆದು ಮುರಿದು  ಒಳನುಗ್ಗಿದ್ದು, ಐದು ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಅಡಿಕೆ ಮತ್ತು ನಗದನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News