ಮೂತ್ರಪಿಂಡದ ಕಸಿ ಅತ್ಯಂತ ಸರಳ: ಡಾ.ಸುದರ್ಶನ್ ಬಲ್ಲಾಳ್
ಮಣಿಪಾಲ, ಜು.5: ಆಧುನಿಕ ತಂತ್ರಜ್ಞಾನದಿಂದಾಗಿ ಮೂತ್ರಪಿಂಡದ ಕಸಿ ಎಂಬುದು ಇಂದು ಅತ್ಯಂತ ಸರಳ ಹಾಗೂ ಸುರಕ್ಷಿತವಾಗಿದೆ. ವಿಭಿನ್ನ ರಕ್ತ ಗುಂಪಿನ ವ್ಯಕ್ತಿಗಳ ಕಿಡ್ನಿ ಕಸಿಯೂ ಇಂದು ಸಾಧ್ಯವಿದೆ ಎಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಸಮೂಹದ ಅಧ್ಯಕ್ಷ ಹಾಗೂ ವೈದ್ಯಕೀಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆ ವತಿಯಿಂದ ನಿರ್ಮಿಸಲಾದ ವಿಭಿನ್ನ ರಕ್ತ ಗುಂಪಿನ ಮೂತ್ರಪಿಂಡ ಕಸಿ (ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್) ಕುರಿತ ಕಿರುಚಿತ್ರ ‘ಸ್ಪೆಷಲ್ ಗಿಫ್ಟ್’ನ್ನು ಕೆಎಂಸಿಯ ಡಾ.ಟಿ.ಎಂ.ಎ.ಪೈ ಸಭಾಂಗಣದಲ್ಲಿ ಅನಾವರಣ ಗೊಳಿಸಿ ಅವರು ಮಾತನಾಡುತಿದ್ದರು.
ಮೂತ್ರಪಿಂಡ ವೈಫಲ್ಯಗೊಂಡವರಿಗೆ ಮೂತ್ರಪಿಂಡದ ಕಸಿಯೇ ಇಂದು ಅತ್ಯುತ್ತಮ ಆಯ್ಕೆಯಾಗಿದೆ. ಇದರ ಯಶಸ್ಸಿನ ಪ್ರಮಾಣ ಶೇ.95 ಆಗಿದೆ. ಆದರೆ ಈ ಕುರಿತು ಜನರಲ್ಲಿ ಇನ್ನೂ ಜಾಗೃತಿ ಮೂಡಬೇಕಾಗಿದೆ. ಈ ಕಿರುಚಿತ್ರ ಜನರಲ್ಲಿ ಇಂಥ ಅರಿವು ಮೂಡಿಸುವ ಪ್ರಯತ್ನ ಮಾಡಿದೆ ಎಂದವರು ಅಭಿಪ್ರಾಯ ಪಟ್ಟರು.
ಈ ಉಚಿತ ಆ್ಯಪ್‌ನ್ನು ದೇಶದ ಯಾವುದೇ ಮೂಲೆಯಲ್ಲಿ, ಯಾವುದೇ ಆಸ್ಪತ್ರೆ ಹಾಗೂ ವೈದ್ಯರು ಸುಲಭವಾಗಿ ಬಳಸಲು ಸಾಧ್ಯವಿದೆ. ಆಂಡ್ರಾಯ್ಡಾ ಫೋನ್‌ಗಳ್ಲಿ ಗೂಗಲ್ ಫ್ಲೇಸ್ಟೋರ್‌ನಿಂದ ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು ಎಂದು ಕೆಎಂಸಿಯ ವೈದ್ಯ ಡಾ. ಚಿರಂಜಯ್ ಮುಖ್ಯೋಫಾದ್ಯಾಯ ತಿಳಿಸಿದರು. ಈ ಆ್ಯಪ್‌ನ್ನು ಮಣಿಪಾಲ ಎಂಐಟಿಯ ಮೂವರು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಈ ಉಚಿತ ಆ್ಯಪ್‌ನ್ನು ದೇಶದ ಯಾವುದೇ ಮೂಲೆಯಲ್ಲಿ, ಯಾವುದೇ ಆಸ್ಪತ್ರೆ ಹಾಗೂ ವೈದ್ಯರು ಸುಲವಾಗಿಬಳಸಲುಸ್ಯಾವಿದೆ. ಆಂಡ್ರಾಯ್ಡಾ ಫೋನ್‌ಗಳ್ಲಿ ಗೂಗಲ್ ಫ್ಲೇಸ್ಟೋರ್‌ನಿಂದ ಇದನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು ಎಂದು ಕೆಎಂಸಿಯ ವೈದ್ಯ ಡಾ. ಚಿರಂಜಯ್ ಮುಖ್ಯೋಫಾದ್ಯಾಯ ತಿಳಿಸಿದರು.
ಈ ಆ್ಯಪ್‌ನ್ನು ಮಣಿಪಾಲ ಎಂಐಟಿಯ ಮೂವರು ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಮಾರ್ಗಸೂಚಿ ಹಾಗೂ ಮಾಹಿತಿಯ ಕೊರತೆಯಿಂದಾಗಿ ಪ್ರತಿಜೀವಕ (ಆ್ಯಂಟಿಬಯಾಟಿಕ್) ನಿರೋಧದ ಸೋಂಕಿನ ಚಿಕಿತ್ಸೆ ಪ್ರತಿದಿನವೂ ಒಂದು ಸವಾಲಾಗಿ ಪರಿಣಮಿಸಿದೆ. ಪ್ರತಿಜೀವಕಗಳ ಸೂಕ್ತವಲ್ಲದ ಬಳಕೆಯಿಂದ ಪ್ರತಿಜೀವಕ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಇದೊಂದು ಗಂಭೀರ ಜಾಗತಿಕ ಸಮಸ್ಯೆಯಾಗಿದೆ ಎಂದು ಡಾ.ಚಿರಂಜಯ್ ವಿವರಿಸಿದರು.