×
Ad

ನೇಣು ಬಿಗಿದು ಆತ್ಮಹತ್ಯೆ

Update: 2017-07-05 20:22 IST

ಪುತ್ತೂರು, ಜು.5 : ಚಿನ್ನಾಭರಣ ತಯಾರಿಕಾ ವೃತ್ತಿ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಪುತ್ತೂರು ನಗರದ ಹೊರವಲಯದ ಹಾರಾಡಿ ಸಮೀಪದ ನಂದಿಲ ಎಂಬಲ್ಲಿ ನಡೆದಿದೆ.

ಪುತ್ತೂರಿನ ಹಾರಾಡಿ ಸಮೀಪದ ನಂದಿಲ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ರಾಘವ ಆಚಾರ್ಯ (37) ಆತ್ಮಹತ್ಯೆ ಮಾಡಿಕೊಂಡವರು. ಪುತ್ತೂರಿನ ಕೋರ್ಟು ರಸ್ತೆಯಲ್ಲಿ ಚಿನ್ನದ ಆಭರಣಗಳ ತಯಾರಿಕಾ ವೃತ್ತಿ ನಡೆಸುತ್ತಿದ್ದ ರಾಘವ ಆಚಾರ್ಯ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ರಾಘವ ಆಚಾರ್ಯ ಅವರ ಪತ್ನಿ ಬುಧವಾರ ವಿವಾಹ ಸಮಾರಂಭವೊಂದಕ್ಕೆ ತೆರಳಿದ್ದರು. ಮಕ್ಕಳು ಶಾಲೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಈ ಸಂದರ್ಭದಲ್ಲಿ ಅವರು ಮನೆಯೊಳಗಿನ ಕೊಠಡಿಯ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ವಿವಾಹ ಸಮಾರಂಭವನ್ನು ಮುಗಿಸಿಕೊಂಡು ಮನೆಗೆ ಬಂದ ಬಳಿಕವಷ್ಟೇ ಈ ವಿಚಾರ ಅರಿವಿಗೆ ಬಂದಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಅವರು ಮಾನಸಿಕವಾಗಿ ನೊಂದು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News