ಬ್ರಿಟನ್: ಬುರ್ಹಾನ್ ವಾನ್ ಸ್ಮಾರಕ ಸಬೆ ರದ್ದು
Update: 2017-07-05 20:45 IST
ಲಂಡನ್, ಜು. 5: ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಸಾವಿನ ವಾರ್ಷಿಕ ದಿನವಾದ ಜುಲೈ 8ರಂದು ಸಭೆ ನಡೆಸಲು ನೀಡಲಾಗಿದ್ದ ಅನುಮತಿಯನ್ನು ಭಾರತ ಸರಕಾರದ ಪ್ರಬಲ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬರ್ಮಿಂಗ್‌ಹ್ಯಾಮ್ ನಗರ ಸಭೆ ಬುಧವಾರ ಹಿಂದಕ್ಕೆ ಪಡೆದುಕೊಂಡಿದೆ.
‘ಕಾಶ್ಮೀರ ರ್ಯಾಲಿ’ ಎಂಬ ಹೆಸರಿನಲ್ಲಿ ನಗರ ಸಭೆಯ ಹೊರಗೆ ನಡೆಯಲು ನಿಗದಿಯಾಗಿರುವ ಸಭೆಯನ್ನು ನಿಲ್ಲಿಸುವಂತೆ ಕೋರಿ ಭಾರತ ಸರಕಾರವು ಬ್ರಿಟನ್ ವಿದೇಶ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿತ್ತು.
ಸಭೆಯ ಸಂಘಟಕರ ಫಲಕಗಳು ಮತ್ತು ಘೋಷಣೆಗಳಲ್ಲಿ ಬುರ್ಹಾನ್ ವಾನಿಯ ಚಿತ್ರಗಳಿದ್ದವು.
ವಾನಿ ಕಳೆದ ವರ್ಷ ಜುಲೈ 8ರಂದು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡೇಟಿನಲ್ಲಿ ಮೃತಪಟ್ಟಿದ್ದಾನೆ.