ಅರಸು ವಸತಿ ಯೋಜನೆಗೆ ಅರ್ಜಿ ಸಲ್ಲಿಸಿ
Update: 2017-07-05 21:12 IST
ಉಡುಪಿ, ಜು.5: ಉಡುಪಿ ತಾಪಂ ವ್ಯಾಪ್ತಿಯಲ್ಲಿ 2017-2018ನೇ ಸಾಲಿನ ದೇವರಾಜು ಅರಸು ವಸತಿ ಯೋಜನೆ ಅನುಷ್ಠಾನಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ವಿಶೇಷ ವರ್ಗದಲ್ಲಿ ಗುರುತಿಸಲಾದ ಬೀಡಿ ಕಾರ್ಮಿಕರು, ಅಂಗವಿಕಲರು, ವಿಧವೆಯರು, ನೇಕಾರರು, ಸಫಾಯಿ ಕರ್ಮಚಾರಿ, ಮಾಜಿ ಸೈನಿಕರು, ಪ್ರವಾಹ ಪೀಡಿತರು, ಮಂಗಳಮುಖಿಯರು ಹಾಗೂ ಇತರರು ಸ್ವಂತ ನಿವೇಶನ ಹೊಂದಿದ ಅರ್ಜಿ ಸಲ್ಲಿಸಲು ಬಾಕಿ ಇರುವ ಫಲಾನುಭವಿಗಳು ಸಂಬಂಧಿಸಿದ ಗ್ರಾಪಂಗಳಿಗೆ ಭೇಟಿ ನೀಡಿ ಜು.10ರೊಳಗೆ ಮನೆ ಮಂಜೂರಾ ತಿಗಾಗಿ ಅರ್ಜಿ ಸಲ್ಲಿಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.