ವಿಜಯ್ ಮಲ್ಯಗೆ ಜಾಮೀನು ರಹಿತ ಬಂಧನ ಆದೇಶ
Update: 2017-07-05 21:58 IST
ಮುಂಬೈ, ಜು. 5: ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ವಿಜಯ್ ಮಲ್ಯ ಹಾಗೂ ಐಡಿಬಿಐ ಅಧಿಕಾರಿಗಳು ಸೇರಿದಂತೆ ಇತರ ಆರೋಪಿಗಳಿಗೆ ಮುಂಬೈ ಪಿಎಂಎಲ್‌ಎ ಕೋರ್ಟ್ ಜಾಮೀನು ರಹಿತ ಬಂಧನ ಆದೇಶ ಹೊರಡಿಸಿದೆ.
ವಿಜಯ್ ಮಲ್ಯ, ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಎ. ರಘುನಾಥನ್, ಬ್ಯಾಂಕ್‌ನ ಮಾಜಿ ಅಧಿಕಾರಿ ಅಗರ್‌ವಾಲ್, ಮಾಜಿ ಉಪ ಆಡಳಿತ ನಿರ್ದೇಶಕ ಒ.ವಿ. ಬುಂದೆಲ್ಲು, ಮಾಜಿ ಜಾರಿ ನಿರ್ದೇಶನಾಲಯದ ಎಸ್.ಕೆ. ವಿ. ಶ್ರೀನಿವಾಸನ್ ಹಾಗೂ ಮಾಜಿ ಆಡಳಿತ ನಿರ್ದೇಶಕ ಬಿ.ಕೆ. ಬಾತ್ರಾ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಕಪ್ಪು ಹಣ ಬಿಳುಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜೂನ್ 14ರಂದು ಜಾರಿ ನಿರ್ದೇಶನಾಲಯ ಆರೋಪ ಪಟ್ಟಿ ದಾಖಲಿಸಿತ್ತು.