ಶ್ರೀ ಗುರುದೇವ ಪದವಿಪೂರ್ವಕಾಲೇಜು ಮತ್ತು ಶ್ರೀ ಗುರುದೇವ ಪ್ರಥಮ ದರ್ಜೆಕಾಲೇಜು : ವಿದ್ಯಾರ್ಥಿ ಸಂಘ ಉದ್ಘಾಟನೆ

Update: 2017-07-06 14:54 GMT

ಬೆಳ್ತಂಗಡಿ,ಜು.6 :ವಿದ್ಯಾರ್ಥಿ ಬದುಕಿನಲ್ಲಿ ತನ್ನನ್ನು ತಾನು ಬೆಳೆಸಿಕೊಳ್ಳುವ ಕಡೆಗೆ ವಿದ್ಯಾರ್ಥಿಗಳು ಸದಾ ಚಿಂತನಶೀಲರಾಗಬೇಕು. ತಾನು ಕಲಿಯುವ ಶಿಕ್ಷಣದಲ್ಲಿ ಹಠವನ್ನು ಬೆಳೆಸಿಕೊಂಡು ಸಾಧಿಸುವ ಮನಸ್ಸನ್ನು ಬೆಳೆಸಿಕೊಂಡಾಗ ಅಂತಹ ವಿದ್ಯಾರ್ಥಿಗಳ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಶ್ರೀ ಗುರುದೇವ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ರಾಜ್ಯ ಸಣ್ಣಕೈಗಾರಿಕಾಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.

ಅವರು ಬುಧವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಶ್ರೀ ಗುರುದೇವ ಪದವಿಪೂರ್ವಕಾಲೇಜು ಮತ್ತು ಶ್ರೀ ಗುರುದೇವ ಪ್ರಥಮ ದರ್ಜೆಕಾಲೇಜಿನ ವಿದ್ಯಾರ್ಥಿ ಸಂಘ ಮತ್ತು ಪ್ರಥಮ ವರ್ಷದ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಅಲ್ಲಿಯ ಶಿಸ್ತಿಗೆ ಒಳಪಟ್ಟು ಅಧ್ಯಯನನಿರತರಾಗಬೇಕು. ಕಾಲೇಜಿನ ಘನತೆಯನ್ನು ಹೆಚ್ಚಿಸುವಕಡೆಗೆ ವಿದ್ಯಾರ್ಥಿಗಳ ಪರಿಶ್ರಮವಿರಬೇಕು. ಕಲಿಕೆ, ಸಭ್ಯತೆ, ವಿಧೇಯತೆಯನ್ನು ಮೈಗೂಡಿಸಿಕೊಂಡಾಗ ಅಂತಹ ವಿದ್ಯಾರ್ಥಿ ಸಮಾಜದಲ್ಲಿ ಸತ್ಪ್ರಜೆಯಾಗಿ ಮೂಡಿಬರಬಲ್ಲ. ವಿದ್ಯಾರ್ಥಿಗಳು ಕಾಲೇಜಿನ ಹೊರಗಿನ ಸೌಂದರ್ಯಕ್ಕೆ ಮಾರು ಹೋಗದೆ ಅಲ್ಲಿ ಸಿಗುವ ಶಿಕ್ಷಣಕ್ಕೆ ಮನಸೋಲಬೇಕು. ವಿದ್ಯಾರ್ಥಿಯೋರ್ವ ಅಶಿಸ್ತನ್ನು ಬೆಳೆಸಿಕೊಂಡಾಗ ಅದನ್ನುಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕುಟುಂಬಕ್ಕೆ ಹೊರೆಯಾಗದರೀತಿಯಲ್ಲಿ ಮಕ್ಕಳು ಬೆಳೆದಾಗ ಸಮಾಜಅಭಿವೃದ್ಧಿಯಾಗಲು ಸಾಧ್ಯಎಂದರು.

ಮುಖ್ಯಅತಿಥಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ, ಸದಾಚಾರವಿದ್ದಾಗ ಸ್ಪೂರ್ತಿದಾಯಕ ವ್ಯಕ್ತಿತ್ವಕಾಣಲು ಸಾಧ್ಯ. ಶೈಕ್ಷಣಿಕ ಚಟುವಟಿಕೆಗಳು ಉತ್ತಮವಾಗಿ ಸಾಗಲು ವಿದ್ಯಾರ್ಥಿಗಳ ಸಹಕಾರ ಅಗತ್ಯ. ಸ್ಪರ್ಧಾತ್ಮಕಯುಗದಲ್ಲಿ ಬುದ್ಧಿವಂತರಾಗಿ ಬೆಳೆಯುವತ್ತ ಸದಾ ಚಿಂತನಶೀಲರಾಗಿರಬೇಕುಬ ಎಂದರು.

ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ, ಕಾಲೇಜಿನ ಆಡಳಿತ ಟ್ರಸ್ಟಿ ಪೀತಾಂಬರ ಹೇರಾಜೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದವಿ ವಿಭಾಗದ ವಿದ್ಯಾರ್ಥಿ ನಾಯಕ ಲಕ್ಷ್ಮೀಶ ಮತ್ತು ಪದವಿಪೂರ್ವ ವಿಭಾಗದ ವಿದ್ಯಾರ್ಥಿ ನಾಯಕ ಸುಮಂತ್‍ಎಸ್‍ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಪ್ರಥಮ ಬಿಕಾಂ ವಿದ್ಯಾರ್ಥಿತೇಜಸ್ ಮತ್ತು ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮೋನಾಕ್ಷಿತನ್ನಅನುಭವವನ್ನು ಹಂಚಿಕೊಂಡರು.ವೇದಿಕೆಯಲ್ಲಿ ಪಿಯುಸಿ ವಿಭಾಗದವಿದ್ಯಾರ್ಥಿ ಸಂಘದ ನಾಯಕರು ಇದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ  ಹೇಮಾವತಿ ಮತ್ತು ಮನುಜ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸವಿತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News